ಶಶಿ ಪಾಟೀಲಗೆ ಚಡ್ಡಿ ಗಿಫ್ಟ್ ನೀಡಿ ಬಂಧಿಸುವಂತೆ ಆಗ್ರಹಿಸಿದ ಕಾಂಗ್ರೆಸ್ ಕಾರ್ಯಕರ್ತರು

  • 15 Jan 2024 , 12:58 AM
  • Belagavi
  • 94

ಬೆಳಗಾವಿ: ವಾಟ್ಸಪ್ ನಲ್ಲಿ ತನ್ನದೆ ಅಶ್ಲೀಲ್ ಫೋಟೋ ಹರಿಬಿಟ್ಟ ಬಿಜೆಪಿ ನಗರ ಅಧ್ಯಕ್ಷ ಶಶಿ ಪಾಟೀಲ ವಜಾ ಮಾಡಿ ಬಂಧಿಸಬೇಕೆಂದು ಬೆಳಗಾವಿ ಕಾಂಗ್ರೆಸ್ ಒತ್ತಾಯಿಸಿದರು. ಗೋವಾ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಿದ ವೇಳೆ ತನ್ನದೆ ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಸೈಬರ್ ಕ್ರೈಮ್ ನಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಬಿಟ್ಟಿರುವ ಶಶಿ ಪಾಟೀಲಗೆ ಚಡ್ಡಿ ಉಡುಗೊರೆ ನೀಡಿ ಲೇವಡಿ ಮಾಡಿದರು.

Read All News