ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಸಂಭ್ರಮ ಆಚರಣೆಯಲ್ಲಿದ್ದಾರೆ. ಇದರ ನಡುವೆ ಸದ್ಯ ರಾಜಕೀಯ ವಲಯದಲ್ಲಿ ಲಕ್ಷ್ಮಣ ಸವದಿ ಹೆಸರು ಬಿಸಿಬಿಸಿ ಚರ್ಚೆಗೆ ಬಂದಿದೆ. ಡಿಸಿಎಂ ಲಕ್ಷ್ಮಣ ಸವದಿ ಮುಂದಿನ ಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಸದ್ಯ ವೈರಲ್ ಆಗಿಬಿಟ್ಟಿದ್ದೆ. ಸವದಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಪೋಸ್ಟ್ ಹಾಕುವ ಮೂಲಕ ಬಿಜೆಪಿಯಲ್ಲಿ ಒಳಾಂಗಣ ರಾಜಕೀಯ ನಡೆದಿದೆ ಎಂಬ ಅನುಮಾನಗಳು ಮೂಡಿವೆ. ಲಕ್ಷ್ಮಣ ಸವದಿ ದೆಹಲಿಗೆ ಹೋಗಿ ಬಿಜೆಪಿ ಹೈ ಕಮಾಂಡ ಭೇಟಿಯಾದ ನಂತರ ಈ ಪೋಸ್ಟ್ ವೈರಲ್ ಆಗಿದ್ದು, ಹಲವಾರು ಅನುಮಾನಗಳು ರಾಜ್ಯ ರಾಜಕಾರಣದಲ್ಲಿ ಮುಡಿವೆ. ಸವದಿ ವಿಚಾರವಾಗಿ ಇಂದು ಬೆಳಗಾವಿಯಲ್ಲಿ ಮಾತನಾಡಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ನನಗೆ ಅದರ ಬಗ್ಗೆ ಗೊತ್ತಿಲ್ಲ, ಪಾಪ ಲಕ್ಷ್ಮಣ ಸವದಿಗೆ ನಸೀಬ್ ಇದ್ರೆ ಅವರೆ ಸಿಎಂ ಆಗಲಿ ಎಂದು ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.