ಚಿಕ್ಕೋಡಿ: ಜನರು ಸರ್ಕಾರದ ನಿಯಮಗಳನ್ನು ಪಾಲಿಸಿ, ತಮ್ಮ ಆರೋಗ್ಯದ ಬಗ್ಗೆ ತಾವೇ ಕಾಳಜಿ ತೋರಬೇಕು, ತಮ್ಮ ಸ್ವಂತ ಪರಿಜ್ಞಾನವಿಲ್ಲದೆ ಇದ್ದರೇ ಕರೋನಾ ನಿಯಂತ್ರಣ ಅಸಾದ್ಯ ಎಂದು ಪುರಸಭೆ ಸದಸ್ಯ ಜಗದೀಶ ಕವಟಗಿಮಠ ಹೇಳಿದರು. ಚಿಕ್ಕೋಡಿ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಮಂಗಳವಾರ ನಡೆದ ವ್ಯಾಪಾರಸ್ಥರು ಹಾಗು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚುತ್ತಿರುವ ಸೊಂಕು ಹಿನ್ನಲೆಯಲ್ಲಿ 15 ದಿನಗಳ ಲಾಕ್ ಡೌನ್ ಮಾಡಲಾಗಿತ್ತು, ಆದರೆ ಜನರು ನಿಯಮಗಳನ್ನು ಗಾಳಿಗೇ ತೂರಿ ಬೇಜವಾಬ್ದಾರಿಯಂತೇ ವರ್ತಿಸುತ್ತಿದ್ದಾರೆ. ಸ್ವಯಂ ಕಾಳಜೀ ಹಾಗೂ ಜವಾಬ್ಯಾರಿಯಿಂದ ವರ್ತಿಸ ಬೇಕಾಗಿದ್ದ ಸಂಧರ್ಭದಲ್ಲಿ ಜನರು ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಲಾಕ್‍ಡೌನ್‍ನಿಂದಾಗಿ ಬಡವರಿಗೆ ಹೆಚ್ಚಿನ ತೊಂದರೆಯಾಗಿತ್ತಿದ್ದು, ದುಪ್ಪಟ್ಟು ಬೇಲೆ ಕೊಟ್ಟು ಅಗತ್ಯ ವಸ್ತಗಳು ಖರಿದಿ ಕದ್ದು ಮುಚ್ಚಿ ನಡೆಯುತ್ತಿದೆ. ಹೀಗಾಗಿ ಆರ್ಥಿಕವಾಗಿ ಪೆಟ್ಟು ತಿಂದ ಸಾರ್ವಜನಿಕ ಹಿತ ಕಾಯುವ ದೃಷ್ಠಿಯಿಂದ ಈ ನಿರ್ಣಯ ಎಲ್ಲರ ಸಹಮತ ದಿಂದ ತೆಗೆದುಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಾ.ಸುಂದರ ರೋಗಿ, ಪಿ.ಎಸ್.ಐ ರಾಕೇಶ ಬಗಲಿ, ಪಿ.ಆಯ್ ಕೋರೆ, ರಾಮಾ ಮಾನೆ, ಸಂಜಯ ಕವಟಗೀಮಠ, ವರ್ದಮಾನ ಸದಲಗೆ, ಸಿದ್ದಪ್ಪಾ ಡಂಗೇರ, ಪ್ರವೀಣ ಕಾಂಬಳೆ, ನಾಗರಾಜ ಮೇಧಾರ ಸೇರಿ ಪುರಸಭೆ ಸದಸ್ಯರು ಹಾಗು ಚಿಕ್ಕೋಡಿ ವ್ಯಾಪಾರಸ್ಥರು ಇದ್ದರು.