ಖಾಸಗಿ ಮಾರುಕಟ್ಟೆ ವಿರುದ್ದ ಕಹಳೆ ಮೊಳಗಿಸಿದ ರೈತರು

  • 14 Jan 2024 , 11:43 PM
  • Belagavi
  • 110

ಬೆಳಗಾವಿ : ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿರುವ ಮಳಿಗೆಗಳಿಗೆ ನೀಡಿರುವ ಹಣವನ್ನು ಬಡ್ಡಿ ಸಮೇತ ಮರುಳಿಸುವುದು, ತರಕಾರಿ ಮೇಲೆ‌ ಹೂಡಿಕೆ ಮಾಡಿರುವ ಬಂಡವಾಳವನ್ನು ಬೆಳಗಾವಿ ಎಪಿಎಂಸಿ ಆಡಳಿತ ಮಡಳಿ‌ಯೇ ನೀಡಬೇಕು ಹಾಗೂ ವರ್ತಕರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ನಡೆಸುತ್ತಿರು ಅಹೋರಾತ್ರಿ ಧರಣಿ ಶುಕ್ರವಾರವೂ ಮುಂದುವರೆದಿದೆ.

ಬೆಳಗಾವಿಯ‌ ಗಾಂಧಿನಗರದ ಹೆದ್ದಾರಿಯ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ‌ ಮಾಡಲು ನೇರವಾಗಿ ಎಪಿಎಂಸಿ ಕಾರ್ಯದರ್ಶಿ, ನಿರ್ದೇಶಕರ ಕುಮ್ಮಕ್ಕಿನಿಂದ ಆಗಿದೆ. ಇದರಿಂದ ಸರಕಾರದ ಎಪಿಎಂಸಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಆಗುತ್ತಿಲ್ಲ. ನಾವು ಜೀವನ ನಡೆಸುವುದೇ ದುಸ್ತರವಾಗಿದೆ. ಆದರಿಂದ ಎಪಿಎಂಸಿಯ ಪ್ರಾಂಗಣದಲ್ಲಿ ಮಳಿಗೆಯನ್ನು ಖರೀದಿ ಮಾಡುವಾಗ ನೀಡಿದ ಹಣ ಬಡ್ಡಿ ಸಮೇತ ನೀಡಬೇಕೆಂದು ಒತ್ತಾಯಿಸಿದರು.

ಬೆಳಗಾವಿ ಎಪಿಎಂಸಿ ಕಾರ್ಯದರ್ಶಿಗೆ ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡುವಾಗ ಲೈಸನ್ಸ್ ನೀಡಲು ಕೇಳುತ್ತದೆ. ಅವರು ಹಿಂದೆ ಮುಂದೆ ನೋಡದೆ ಒಂದು ಮಳಿಗೆಗೆ 20 ಲಕ್ಷ ರೂ.ಗಳಂತೆ ಲಂಚ ಪಡೆದು ಲೈಸನ್ಸ್ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Read All News