ಬೆಳಗಾವಿ : ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಲು ಆಗ್ರಹಿಸಿ ನಾಳೆಯಿಂದ ಅನಿರ್ಧಿಷ್ಟ ಧರಣಿಯೊಂದಿಗೆ "ಆಮರಣ ಉಪವಾಸ" ಸತ್ಯಾಗ್ರಹಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಹೇಳಿದರು.
ಬೆಳಗಾವಿ ಎಪಿಎಂಸಿ ಆವರಣದ ಪ್ರತಿಭಟನಾ ಸ್ಥಳದಲ್ಲಿ ಸಿದ್ದಗೌಡ ಮೋದಗಿ ಹೇಳಿಕೆ ಸಿ ದಗೌಡ ಮೋದಗಿ ನೇತೃತ್ವದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಅವರು, ಅಕ್ರಮವಾಗಿ ಇರುವ ಜೈಕಿಸಾನ್ ತರಕಾರಿ ಮಾರುಕಟ್ಟೆ ಬಂದ್ ಮಾಡಬೇಕು.
ಖಾಸಗಿ ಮಾರುಕಟ್ಟೆ ವಿರುದ್ಧ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ..ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ, ಹೀಗಾಗಿ ನಾಳೆಯಿಂದ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.
ನಾಳೆಯಿಂದ ನಾನೊಬ್ಬನೇ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವೆ. ಸರ್ಕಾರ ತಕ್ಷಣವೇ ಎಪಿಎಂಸಿ ಉಳಿಸಲು ಮುಂದಾಗಬೇಕು.
ಖಾಸಗಿ ತರಕಾರಿ ಮಾರುಕಟ್ಟೆ ಯನ್ನ ಬಂದ್ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದ ಸಿದ್ದಗೌಡ ಮೋದಗಿ ಹೇಳಿದರು.