ಚಿಕ್ಕೋಡಿ: ಮಂಗಳವಾರ ನಿಪ್ಪಾಣಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ 12 ಲಕ್ಷ ಅನುದಾನದಲ್ಲಿ ಸರ್ಕಾರಿ ಶಾಲಾ ಕೋಣೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ತಾ.ಪಂ ಅಧ್ಯಕ್ಷ ಸುನೀಲ ಸಂಕಪಾಳ ಅವರು ಅಭಿವೃದ್ಧಿಯಲ್ಲಿ ನಿಪ್ಪಾಣಿ ಮತಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡಿಸಿದ ಸಚಿವೆ ಶಶಿಕಲಾ ಜೋಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೋಲ್ಲೆ ಯವರಿಗೆ ಸಲ್ಲುತ್ತದೆ. ನಿಪ್ಪಾಣಿ ಮತಕ್ಷೇತ್ರದ ರೈತರ ಏಳಿಗೆಗಾಗಿ ಕೂಡ ಪ್ರಯತ್ನಿಸುತ್ತಿದ್ದಾರೆ. ಬ್ರಿಡ್ಜ ಬಾಂದಾರ, ಪಾಣಂದ ರಸ್ತೆಗಳು,ಗಂಗಾಕಲ್ಯಾಣ ಯೋಜನೆಗಳು, ಬೊರವೇಲ್ ಮಂಜೂರಾತಿ ಮಾಡಿಸಿ ರೈತರ ಸಮಗ್ರ ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ಮುಖ್ಯಾಧ್ಯಾಪಕ ಮಹಾದೇವ ಪಾಟೀಲ ಮಾತನಾಡಿದರು. ತಾ.ಪಂ ಸದಸ್ಯೆ ಅನೀತಾ ದೇಸಾಯಿ, ಕೃಷ್ಣಾ ಸಂಕಪಾಳ, ತಾತೋಬಾ ಮಾನೆ, ಶಂಕರ ಸಿರಗಾಂವೆ, ಸರ್ಜೇರಾವ ಮಗದುಮ್ಮ ಸೇರಿ ಹಲವರು ಉಪಸ್ಥಿತರಿದ್ದರು. ಪ್ರಕಾಶ ಮ್ಹಾಳುಂಗೆ ಸ್ವಾಗತಿಸಿದರು, ಹಾಗೂ ಮಾರುತಿ ಪಾಟೀಲ ನಿರೂಪಿಸಿದರು.ಸೋಮೇಶ ಉಗಾರೆ ವಂದಿಸಿದರು .