1313 ಜನರ ವರದಿ ನಿರೀಕ್ಷೆ ಯಲ್ಲಿ ಜಿಲ್ಲಾಡಳಿತ
- 30 Dec 2023 , 6:09 PM
- Belagavi
- 112
ಬೆಳಗಾವಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ರುದ್ರ ನರ್ತನ ಮುಂದುವರೆದಿದೆ ಇಂದು ಗುರುವಾರ ಬೆಳಗಾವಿ ಜನರಲ್ಲಿ ತೀವ್ರ ಆತಂಕ ಮಾರ್ಪಟ್ಟಿದೆ ಇಂದು ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 52 ಆಕ್ಟಿವ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ಏರುತ್ತಲೇ ಇದ್ದು ಇಂದು ಪತ್ತೆಯಾದ ಎಲ್ಲರಿಗೂ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಒಟ್ಟು 3034 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ ಕಂಪ್ಲೀಟ್ ಆಗಿದೆ. 5104 ಜನರ 28 ದಿನಗಳ ಹೋಮ್ ಕ್ವಾರಂಟೈನ ಕಂಪ್ಲೀಟ್ ಆಗಿದೆ ಒಟ್ಟು 9762 ಜನರ ಥ್ರೋಟ್ ಸ್ಕ್ರ್ಯಾಬ್ ಪ್ರಯೋಗಾಲಕ್ಕೆ ರವಾನೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ 139 ಜನರಲ್ಲಿ ಕೋರಾನ ಪಾಸಿಟಿವ್ ಕೇಸ ಕಂಡು ಬಂದಿದ್ದು. ಓರ್ವ ವೃದ್ಧೆ ಸಾವನಪ್ಪಿದ್ದು 94 ಜನ ಸೋಂಕಿತರು ಗುಣುಮುಖರಾಗಿ ಡಿಸ್ಚಾರ್ಜ್ ಮಾಡಲಾಗಿದೆ. 8146 ಜನರ ವರದಿ ಕೊರೊನ ನೆಗೆಟಿವ ಬಂದಿದೆ 1313 ಜನರ ವರದಿ ನಿರೀಕ್ಷೆ ಯಲ್ಲಿ ಜಿಲ್ಲಾಡಳಿತ ನಿಂತಿದೆ. ಬೆಳಗಾವಿ ಜಿಲ್ಲೆ ಗೆ ಹೊರ ರಾಜ್ಯದ ನಂಜು ತೀರಾ ದಿನದಿಂದ ದಿನಕ್ಕೆ ಏರುತ್ತಲೇ ಇದೇ ನೆರೆಯ ಮಹಾರಾಷ್ಟ್ರ ನಂಟು ತೀರಾ ಆತಂಕಕ್ಕೆ ಏಡೆ ಮಾಡಿಕೊಟ್ಟಿದೆ.