ಬೆಳಗಾವಿ: ಹಿಜಾಬ್ ವಿವಾದ ಬೆಳಗಾವಿ ಜಿಲ್ಲೆಗೂ ವ್ಯಾಪಿಸಿದ್ದು ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಹಿಜಾಬ್ ವಿವಾದದ ಕಾವು ಜೋರಾಗಿದೆ.
ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ನಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದು ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆದು ಬರುವಂತೆ ಹೇಳಿದರೂ ನಾವು ಹಿಜಾಬ್ ತಗೆಯುವುದಿಲ್ಲ ಎಂದು ಹೇಳಿದಾಗ ಕೆಲ ಯುವಕರು ಆಗಮಿಸಿ ಕಾಲೇಜು ಆಡಳಿತ ಮಂಡಳಿಯೊಂದಿಗೆ ತಗಾದೆ ತಗದರು.
ಪೊಲೀಸರು ಮಧ್ಯ ಪ್ರವೇಶಸಿ ತಿಳಿ ಹೇಳಿದರೂ ತಮ್ಮ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಲ್ಲಾಓ ಅಕಬರ ಎಂದು ಘೋಷಣೆ ಕೂಗಿದರು. ಕೂಡಲೇ ಕೆಲವರನ್ನು ಪೊಲೀಸರು ವಶಕ್ಕೆ ಪಡೆದ ಪರಿಸ್ಥಿತಿ ತಿಳಿಗೊಳಿಸಿದರು.