ಬಾಗಲಕೋಟೆ: ಕೋವಿಡ್-19 ಹಿನ್ನಲೆಯಲ್ಲಿ ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಯುಷ್ ಔಷಧಿಗಳ ಕಿಟ್‍ಗಳನ್ನು ಹುನಗುಂದ ತಹಶೀಲ್ದಾರ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿತರಿಸಲು ಶನಿವಾರ ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಹುನಗುಂದ ಸರಕಾರಿ ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಸಿ.ಪಿ.ರಕ್ಕಸಗಿ ಹಾಗೂ ಚಿತ್ತವಾಡಗಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಎಸ್.ಪಿ.ನಿಡಗುಂದಿ ಇವರು 75 ಆಯುಷ್ ಔಷಧಿಗಳ ಕಿಟ್‍ಗಳನ್ನು ವಿತರಿಸಿದ್ದಾರೆ.