ಆರ್.ಆರ್.ಎಸನಿಂದ ನಾಳೆ ಗೂಗಲ್ ಮೀಟ್ ಮುಖಾಂತರ ರಕ್ಷಾ ಬಂಧನ ಕಾರ್ಯಕ್ರಮ

  • 15 Jan 2024 , 1:21 AM
  • Belagavi
  • 102

ಬೆಳಗಾವಿ: ಸಮಾಜದಲ್ಲಿ ಸ್ತ್ರೀಯರು ಪುರುಷರಿಗೆ ರಕ್ಷೆ ಕಟ್ಟಿ ಪರಸ್ಪರ ಸಹೋದರಿ, ಸಹೋದರ ಸಂಬಂಧವನ್ನು ಭದ್ರಗೊಳಿಸುವಂತ ಈ ಹಬ್ಬವೆ ರಕ್ಷಾ ಬಂಧನ ಇದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವ್ಯಾಪಕವಾದ ರಾಷ್ಟ್ರೀಯ ಸ್ವರೂಪವನ್ನು ಕೊಟ್ಟಿದೆ. ಅನುದಿನವೂ ಪರಸ್ಪರರನ್ನು ಒಳ್ಳೆಯ ರೀತಿಯಿಂದ ಕಾಣುತ್ತಾ, ಸುಖ ದು:ಖಗಳಲ್ಲಿ ಸಮರಸರಾಗಿ ಬಾಳುವ ಹಾಗೂ ರಾಷ್ಟ್ರ ರಕ್ಷಣೆಯ ಸಂಕಲ್ಪ ತೊಡುವ ಸಂದರ್ಭವೆ ರಕ್ಷಾಬಂಧನ.

  ಈ ರಕ್ಷಾ ಬಂಧನದ ಅಂಗವಾಗಿ ಬೆಳಗಾವಿಯ ಮಹಾಂತೇಶ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರವಿವಾರ ಆಗಸ್ಟ್ 2 ರಂದು ಬೆಳಿಗ್ಗೆ 7.30ಕ್ಕೆ ಗೂಗಲ್ ಮೀಟ್ ಆಫ್ ಮುಖಾಂತರ ವಿಡಿಯೋ ಸಂವಾದ ಹಾಗೂ ಕಾರ್ಯಕ್ರಮ ನಡೆಯಲ್ಲಿದೆ ಎಂದು ಸಂಘಟನಾಕಾರರು ತಿಳಿಸಿದ್ದಾರೆ.

Read All News