ಬೆಳಗಾವಿ- ಧಾರವಾಡ ರೈಲ್ವೆ ಯೋಜನೆ ಬದಲಾವಣೆಗಾಗಿ ಕಾಡಾ ಕಚೇರಿ ಮುಂದೆ ರೈತರ ಪ್ರತಿಭಟನೆ

  • 17 Dec 2023 , 8:51 PM
  • Belagavi
  • 103

ಬೆಳಗಾವಿ: ಬೆಳಗಾವಿ-ಧಾರವಾಡ ನಿಯೋಜಿತ ರೈಲ್ವೆ ಮಾರ್ಗದ ಕೆ.ಕೆ.ಕೊಪ್ಪ- ದೇಸೂರ ಮುಖಾಂತರ ಹೋಗುವ ಹೊಸ ಮಾರ್ಗ ರೈತರ ಫಲವತ್ತತೆಯ ಭೂಮಿಯ ಬದಲಾಗಿ ಪುನರ್ ಸರ್ವೆ ಮಾಡಿದ ಬಂಜರು ಭೂಮಿಯಿಂದ ಬದಲಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಗಾವಿ ಜನರ ಬಹು‌ ವರ್ಷಗಳ ಬೇಡಿಕೆಯಾಗಿರುವ ಧಾರವಾಡ- ಬೆಳಗಾವಿ ನಿಯೋಜಿತ ಹೊಸ ರೈಲ್ವೆ ಮಾರ್ಗ ಮಾಡುತ್ತಿರುವುದು ಸ್ವಾಗತಾರ್ಹ. ಅದತ ಜೊತೆಗೆ ಬೆಳಗಾವಿ- ಕೊಲ್ಲಾಪುರ ಮಾರ್ಗ ಜೋಡಿಸಬೇಕು.

ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ರೈತರ ಫಲವತ್ತಾದ ಭೂಮಿಯನ್ನು ಕೆ.ಕೆ.ಕೊಪ್ಪದಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read All News