ಉಕ್ರೇನ್ ನಿಂದ ಬೆಳಗಾವಿಗೆ ಬಂದ 9 ವಿದ್ಯಾರ್ಥಿಗಳು

  • 18 Dec 2023 , 12:05 AM
  • Belagavi
  • 93

ಬೆಳಗಾವಿ : ಉಕ್ರೇನನಿಂದ ತಾಯ್ನಾಡಿಗೆ ವಾಪಸ್ ಆದ 9 ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ಊರುಗಳಿಗೆ ತೆರಳಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ 7 ವಿದ್ಯಾರ್ಥಿಗಳು ಆಗಮಿಸಿದರೆ, ಹುಬ್ಬಳ್ಳಿಗೆ 2 ವಿದ್ಯಾರ್ಥಿಗಳು ಆಗಮಿಸಿದ್ದು ಅವರು ಬೆಳಗಾವಿಗೆ ಬಂದು ಸೇರಲಿದ್ದಾರೆ. 9 ವಿದ್ಯಾರ್ಥಿಗಳ ನ್ನ ಬೆಳಗಾವಿ ಜಿಲ್ಲಾಡಳಿತ ದಿಂದ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಸ್ವಾಗತಿಸಿದರು.

ವಿದ್ಯಾರ್ಥಿಗಳಿಗೆ ಸಿಹಿ ತಿನಿ,ಕೆಕ್ ಕಟ್ ಮಾಡಿ, ಹೂವಿನ ಹಾರ ಹಾಕಿ ಪೋಷಕರಿಂದ ಸ್ವಾಗತ ಕೊರಲಾಯಿತು. ಬೆಳಗಾವಿ ನಿವಾಸಿ ಶ್ರೇಯಾ ಹೆರಕಲ್, ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದ ಅವಳಿ‌ ಸಹೋದರಿಯಾದ ಪ್ರೀಯಾ ಛಬ್ಬಿ, ಪ್ರೀತಿ ಛಬ್ಬಿ.

ಗೋಕಾಕ ತಾಲೂಕಿನ ಅಮೋಘ ಚೌಗಲೆ. ರಾಯಬಾಗ ತಾಲೂಕಿನ ಪ್ರೀಯಾ ನಿಡಗುಂದಿ ಆಗಮಿಸಿದರು. ಬಾಗಲಕೋಟೆ ಜಿಲ್ಲೆ ಇಬ್ಬರು ವಿದ್ಯಾರ್ಥಿಗಳು ಸಹ ಆಗಮಿಸಿದ್ದಾರೆ. ವಿದ್ಯಾರ್ಥಿಗಳು ಮತ್ತವರ ಪೋಷಕರಲ್ಲಿ ಸಂತಸದ ವಾತಾವರಣ

ತುಂಬಿತ್ತು. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಕ್ಕೆ ಧನ್ಯವಾದ ಅರ್ಪಿಸಿದ ವಿದ್ಯಾರ್ಥಿಗಳು.

Read All News