ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ ಹೋಮ ಹಾಗೂ ಪೂಜೆ

  • 17 Dec 2023 , 9:45 PM
  • Haveri
  • 128

ಹಾವೇರಿ: ವಿಶ್ವದಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಹಲವು ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ ಕೋವಿಡ್ ತಡೆಯುವ ದೃಷ್ಟಿಯಿಂದ ರಾಣೇಬೆನ್ನೂರು ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರು ಹೋಮ ಹವನ ಸೇರಿದಂತೆ ವಿಶೇಷ ಪೂಜಾ ಕಂಕೈರ್ಯಗನ್ನು ನೆರವೇರಿಸಿದರು. ಗ್ರಾಮದ ಸಂತ ಶ್ರೀ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆಯಿಂದಲೇ ಆರಂಭವಾದ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರ ಹಾಗೂ‌ ಎಲ್ಲರೂ ಪಾಲ್ಗೊಂಡು ದೇವರಲ್ಲಿ ಪ್ರಾರ್ಥಿಸಿದರು.ಈ ಸಮಯದಲ್ಲಿ ತಾ.ಪಂ. ಸದಸ್ಯ ರೂಪ್ಲೆಪ್ಪ ಹಂಚಿನಮನಿ ಮಾತನಾಡಿ ಈ ಕೊರೋನಾ ಮಾಹಾಮಾರಿ ವೈರಸ್‍ನಿಂದ ದೂರವಿಡಲು ದೇವರ ಮೋರೆ ಹೋಗಲಾಗಿದೆ. ಗ್ರಾಮದಲ್ಲಿ ಎಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಲಚಮಪ್ಪ ನಾಯಕ,ದಯಾನಂದ ಜಾಧವ, ಎಚ್.ಎಂ.ನಾಯಕ, ಗಣೇಶ ಲಮಾಣಿ,ಕುಬೇಪ್ಪ ಲಮಾಣಿ, ಚನ್ನಪ್ಪ ಲಮಾಣಿ, ಜಯಪ್ಪ ಲಮಾಣಿ, ಮಾಲತೇಶ ಲಮಾಣಿ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಇತರರು ಉಪಸ್ಥಿತರಿದ್ದರು.

Read All News