ಬಿ ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿದೆಸಿದೆ. ಬಿಎಸ್ವೈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸಮೃದ್ಧ ಕರ್ನಾಟಕ ನಿರ್ಮಿಸುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖರಾಗಿ, ಕಳೆದ ಒಂದು ವರ್ಷದಲ್ಲಿ ಹಲವು ಪ್ರಾಕೃತಿಕ ಸಂಕಷ್ಟಗಳ ನಡುವೆಯೂ ಸಂವೇದನಾಶೀಲ ಸರಕಾರವಾಗಿ ಜನಹಿತಕ್ಕೆ ಸ್ಪಂದಿಸಿದೆ, ಪ್ರಗತಿಪರ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿ ಸ್ಪಷ್ಟವಾದ ಹೆಜ್ಜೆಗಳನ್ನು ಇಟ್ಟಿದೆ. ಎದುರಾದ ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ತಂಡದೊಂದಿಗೆ ಕ್ರಿಯಾಶೀಲತೆಯಿಂದ ಕರ್ತವ್ಯ ಮುಖಿಯಾಗಿದ್ದಾರೆ. ದಾಖಲೆಯ ಮಳೆ ಹಾಗೂ ಕೋವಿಡ್ ನಂತಹ ಸಂಕಷ್ಟಗಳನ್ನು ನಿರ್ವಹಿಸುವಲ್ಲಿ ಇಡೀ ಸಚಿವ ಸಂಪುಟದ ಹಾಗೂ ಬಿಜೆಪಿ ಶಾಸಕರುಗಳ ಕ್ರಿಯಾಶೀಲತೆ ಮಾದರಿಯಾಗಿದೆ ಎಂದು ಹೇಳುವುದರಲ್ಲಿ ತಪ್ಪಿಲ್ಲ.

1. ಹೂ ಬೆಳೆಗಾರರಿಗೆ ನೆರವಾಗಲು ಹೆಕ್ಟೇರ್ ಗೆ ಗರಿಷ್ಠ 25 ಸಾವಿರ ರೂಗಳಂತೆ ಪರಿಹಾರ. 2. ಪಾರಂಪರಿಕ ವೃತ್ತಿನಿರತ 2,30,000 ಕ್ಷೌರಿಕರು ಮತ್ತು 60,000 ಮಡಿವಾಳರಿಗೆ 7,75,000 ಟ್ಯಾಕ್ಸಿ ಚಾಲಕರು ಮತ್ತು ಆಟೋ ಚಾಲಕರಿಗೆ ತಲಾ ಐದು ಸಾವಿರ ರೂಗಳ ಪರಿಹಾರ. 3. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ವಿದ್ಯುತ್ ಬಿಲ್ಲಿನ ಫಿಕ್ಸೆಡ್ ಚಾರ್ಜ್ ನ್ನು ಎರಡು ತಿಂಗಳ ಅವಧಿಗೆ ಪೂರ್ತಿಯಾಗಿ ಮನ್ನಾ. 4. ಬೃಹತ್ ಕೈಗಾರಿಕೆಗಳಿಗೆ ಎರಡು ತಿಂಗಳ ವಿದ್ಯುತ್ ಬಿಲ್ಲಿನ ಫಿಕ್ಸೆಡ್ ಚಾರ್ಜ್ ನ ಪಾವತಿಯನ್ನು 2 ತಿಂಗಳ ಅವಧಿಗೆ ಬಡ್ಡಿರಹಿತವಾಗಿ ಮುಂದೂಡಿಕೆ. 5. ನೇಕಾರರ ಸಾಲ ಮನ್ನಾ ಯೋಜನೆಯಡಿ ಬಾಕಿ 80 ಕೋಟಿ ರೂಗಳ ಬಿಡುಗಡೆ ಮಾಡಿ ನೇಕಾರರಿಗೆ ಹೊಸ ಸಾಲ ಸೌಲಭ್ಯಕ್ಕೆ ಅನುವು. 6. ರಾಜ್ಯದ 54,000 ಕೈಮಗ್ಗ ನೇಕಾರರಿಗೆ ಪ್ರತಿವರ್ಷ ಎರಡು ಸಾವಿರ ರೂಗಳಂತೆ ಅವರ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ನೀಡುವ ನೇಕಾರರ ಸಮ್ಮಾನ್ ಯೋಜನೆಗೆ ಚಾಲನೆ. 7. 15.80 ಲಕ್ಷ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ 5000 ರೂ ಪರಿಹಾರ ನೇರವಾಗಿ ಅವರ ಖಾತೆಗಳಿಗೆ ಜಮಾ. 8. ಹಣ್ಣು ಮತ್ತು ತರಕಾರಿ ಬೆಳೆಗಾರರು ಹೆಕ್ಟೇರ್ ಗೆ ಗರಿಷ್ಠ 15,000 ರೂ ಗಳಂತೆ ಒಟ್ಟು ಒಂದು 137 ಕೋಟಿ ರೂ.ಗಳ ಪರಿಹಾರ. 9. ವಿದ್ಯುತ್ ಚಾಲಿತ ಮಗ್ಗದ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು 1.25 ಲಕ್ಷ ಕೆಲಸಗಾರರಿಗೆ ಒಂದು ಭಾರಿ ತಲಾ 2000 ರೂ ಗಳಂತೆ ಒಟ್ಟು 25 ಕೋಟಿ ರೂ ನೀಡಿಕೆ. 10. ಮೆಕ್ಕೆಜೋಳ ಬೆಳೆದಿರುವ ಸುಮಾರು 10 ಲಕ್ಷ ರೈತರಿಗೆ ತಲಾ 5000 ರೂ ಗಳಂತೆ ಒಟ್ಟು 500 ಕೋಟಿ ರೂ ಪರಿಹಾರ. 11. ಕೊಳಚೆ ಪ್ರದೇಶಗಳ ನಿವಾಸಿಗಳು ನಿರ್ಗತಿಕ ವಲಸಿಗರಿಗೆ, ಕಟ್ಟಡ ಕಾರ್ಮಿಕರಿಗೆ ರೂ 60 ಕೋಟಿ ವೆಚ್ಚದಲ್ಲಿ ಪ್ರತಿದಿನ 7.75 ಲಕ್ಷ ಲೀಟರ್ ಹಾಲು ವಿತರಣೆ. 12. ಮೆಕ್ಕೆಜೋಳ ಬೆಳೆದಿರುವ ರೈತರಿಗೆ ಉತ್ಪನ್ನಗಳನ್ನು ಕೆಎಂಎಫ್ ಮೂಲಕ 22000 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ. 13. 42500 ಆಶಾ ಕಾರ್ಯಕರ್ತರಿಗೆ ತಲಾ 3000 ರೂ ಪ್ರೋತ್ಸಾಹಧನ.

1. ರೈತರ ಸಮಸ್ಯೆಗಳಿಗೆ ಸಲಹೆ ನೀಡುವ ಸಲುವಾಗಿ ಅಗ್ರಿ ವಾರ್ ರೂಮ್ ನ್ನು ಸ್ಥಾಪನೆ. ದೂರವಾಣಿ ಮೂಲಕ ಸಮಸ್ಯೆಗಳಿಗೆ ಸ್ಪಂದನೆ. 2. ಲಾಕ್ ಡೌನ್ ಸಂದರ್ಭದಲ್ಲಿಯೂ ಗ್ರೀನ್ ಪಾಸ್ ವಿತರಿಸಿ ಕೃಷಿ ಸಾಮಗ್ರಿಗಳ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುವು. 3. ಹಾಪ್ ಕಾಮ್ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ರೈತರಿಂದ ನೇರವಾಗಿ ನಿಗದಿತ ಬೆಲೆಗೆ ಹಣ್ಣು ತರಕಾರಿಗಳ ಖರೀದಿ. 4. ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿ ರೈತ ಕುಟುಂಬಕ್ಕೆ ನೀಡುತ್ತಿರುವ ವಾರ್ಷಿಕ 6 ಸಾವಿರ ರೂಗಳು ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ 4 ಸಾವಿರ ರೂಗಳ ನೆರವು ಪ್ರಸ್ತಕ ಸಾಲಿನಲ್ಲಿ 883.95 ಕೋಟಿ ರೂ ನೆರವು. 5. 2019 - ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೊಂದಾಯಿಸಿದ 23,61,501 ಜನ ರೈತರಿಗೆ ರೂ 1,020,19 ಕೋಟಿ ಜಮಾ ಪರಿಹಾರ ವಿತರಣೆ. 6 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 25 ಎಚ್ ಪಿ ವರೆಗಿನ ಸಣ್ಣ ಟ್ಯಾಕ್ಟರ್ ಗೆ 2 ಲಕ್ಷ ರೂಗಳ ಸಹಾಯಧನ ಹೆಚ್ಚಳ. 7. ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯುವ ಪ್ರೇರಣೆ ನೀಡುವ ಉದ್ದೇಶದಿಂದ ಪ್ರತಿ ಹೆಕ್ಟೇರಿಗೆ 7500 ರೂ ಪ್ರೋತ್ಸಾಹ ಧನ ನೀಡುವ ಕರಾವಳಿ ಪ್ಯಾಕೇಜ್ ಜಾರಿ 5,189 ಭತ್ತದ ಬೆಳೆಗಾರರಿಗೆ ರೂ 2,258 ಕೋಟಿ ಪ್ರೋತ್ಸಾಹಧನ ನೀಡಿಕೆ.


1. ಕೊರೋನ ಸಂಕಷ್ಟದಲ್ಲಿ ಆರ್ಥಿಕವಾಗಿ ಸದೃಢವಾಗಿರುವಂತಹ ಸಮೂಹ ' ಎ ' ವರ್ಗದ ದೇವಾಲಯಗಳ ನಿಂದ ಸಮೂಹ ' ಸಿ ' ವರ್ಗದ ದೇವಾಲಯಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಆಹಾರ ಕಿಟ್ ಗಳ ವಿತರಣೆ. 2. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲ ಬರುವ ದೇವಾಲಯಗಳ ಕೊವೀಡ್ 19 ರ ಹಿನ್ನಲೆಯಲ್ಲಿ ಊಟೊಪಚಾರ ವಿಲ್ಲದೆ ಬಳಲುತ್ತಿದ್ದ ಸುಮಾರು 7 ಲಕ್ಷ ಜನರಿಗೆ ಊಟೊಪಚಾರದ ವ್ಯವಸ್ಥೆ ಮಾಡಲಾಗಿದೆ. 3. ಸಮಾಜದದ ಕಡುಬಡವರಿ ಮದುವೆಗೆ ಸಹಾಯವಾಗಿ ಸಪ್ತಪದಿ ಯೋಜನೆ , ದುಂದುವೆಚ್ಚಕ್ಕೆ ಕಡಿವಾಣ , ಮಂಗಳ ಕಾರ್ಯಕ್ಕೆ ಅನುಕೂಲ. 4. ಅರ್ಚಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ವದಗಿಸಲು ಪಿಎಮ್ ಜನಧನ ಯೋಜನೆಯಡಿ ಆರ್ಥಿಕ ನೇರವು.

1. ವೈದ್ಯಕೀಯ ಶಿಕ್ಷಣ ಇಲಾಖೆಯ 5 ಸ್ವಾಯತ್ತ ವೈದ್ಯಕೀಯ ಕಾಲೇಜಗಳನ್ನು ಮತ್ತು ಒಂದು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಹಾಗೂ ಕೋವಿಡ್ ಸೆಂಟರ್ ತಪಾಸಣಾ ಕೇಂದ್ರವಾಗಿ ಘೋಷಣೆ ಮಾಡಿದೆ. 2. ಇಲಾಖೆಯಲಲ್ಲ 15 ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ಕೊರೋನಾ ವೈರಸ ಆರೋಗ್ಯ ತಪಾಸಣೆ ನಡೆಸಲು ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. 3. ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ತಪಾಸಣಾ ಕೇಂದ್ರಗಳ ಸ್ಥಾಪಣೆ.
4. ಬೆಂಗಳೂರು ನಗರದ 11 ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಕೊರೊನಾ ಸೋಂಕಿತರು ತಪಾಸಣೆಗೆ 2000 ಬೇಡ್ ಗಳ ವ್ಯವಸ್ಥೆ ಮಾಡಲಾಗಿದೆ.

1. 2019/2020 ಸಾಲಿನ ಅವ್ಯಯದಲ್ಲಿ ಜಲಸಂಪನ್ಮೂಲ ಇಲಾಖೆಗೆ ರೂ. 16984.25 ಕೋಟಿ ರೂ ಪರಿಷ್ಕೃತ ಅನುದಾನ. 2. ಕೃಷ್ಣಾ ಮೇಲ್ದಂಡೆ ಯೋಜನೆಯಡಿ 3 ಹಂತಗಳ ಊಪ ಯೋಜಬೆ ಯಾಗಿರುವ ಹಾಗೂ ಕೊಪ್ಪಳ ಯಾತ ನೀರಾವರಿ ಯೋಜನೆಯಡಿ ಕೊಪ್ಪಳ ಜುಲ್ಲಯ (45) ಕೆರೆ, ಬಾಗಲಕೋಟೆ ಜಿಲ್ಲೆಯ (15) ಕೆರೆ, ಗದಗ ಜಿಲ್ಲೆಯ (12) ಕೆರೆಗಳನ್ನು ತುಂಬಿಸಲು ಒಟ್ಟು 1864,04 ಕೋಟಿ ಪ್ಯಾಕೇಜ್ ಅಡಿಯಲ್ಲು ಗುತ್ತಿಗೆ ನೀಡಲಾಗಿದೆ ಹಾಗೂ ಕಾಮಗಾರಿಗಳು ಪ್ರಗತಿಯಲ್ಲಿ ಇವೇ . 3. ಮಹಧಾಯಿ ನ್ಯಾಯಾದಿಕರಣ ತೀರ್ಫಿನಂತೆ ಕಾಮಗಾರಿಗಳ ಅನುಷ್ಠಾನಕ್ಕಾಗಿ ಒಟ್ಟಾರೆ 1677.30 ಅಂದಾಜು ಗಳ ನಡುವೆ ಸಂಪುಟ ವಿಸ್ತರಣೆ ನೀಡಿದೆ. 4.ಭದ್ರಾ ಜಲಾಶಯದಿಂದ ನೀರನ್ನು ಎತ್ತಿ ಅಜ್ಜಂಪುರ ಸುರಂಗದ ವರೆಗೆ ನೀರು ಪುರೈಕೆ ಮಾಡಲು ಸುರಂಗ ನಿರ್ಮಾಣ ಕಾಮಗಾರಿಯನ್ನು 2019 ನೇ ಸಾಲಿನಲ್ಲಿ ಪೂರ್ಣ ಗೊಳಿಸಿ ಪ್ರಾಯೋಗಿಕ ವಾಗಿ ಚಾಲಣೆ ಗೊಳಸಿ ಪ್ರಥಮ ಭಾರಿಗೆ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 3.48 ಟಿಎಂಸಿ ನೀರು ಹರಿಸಲಾಗಿದೆ. 5. ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ತಾಲೂಕಿನ 58 ಕೆರೆಗಳು ಮತ್ತು ಮೊಳಕಾಲೂರು ತಾಲ್ಲೂಕಿನ 20 ಕೆರೆಗಳನ್ನು ತುಂಬಿಸಲು ಜಲಾಶಯಕ್ಕೆ 755.88 ಕೋಟಿ ಮೊತ್ತದ ಪ್ಯಾಕೇಜ್ ಕಾಮಗಾರಿ ಗಳನ್ನು ಮತ್ತು ಪಾವಗಡ ತಾಲೂಕಿನ 38 ಕೆರೆ ಗಳು ಹಾಗೂ ಚಳ್ಕಕೆರೆ ತಾಲೂಕಿನ 21 ಕೆರೆಗಳನ್ನು ತುಂಬಿಸಲು 532.45 ಕೋಟಿ ಮೊತ್ತದ ಪ್ಯಾಕೇಜ್ ಬಿಡುಗಡೆ ಮಾಡಿದೆ. 6.ತುಂಗಭದ್ರಾ ಜಲಾಶಯದ ಸಂಗ್ರಹಣಾ ಸಾಮರ್ಥೈದ ಹೆಚ್ಚಳಕ್ಕೆ ನವಲ ಗ್ರಾಮದ ಹತ್ತಿರ ಸಮತೋಳುವಾ ಜಲಾಶಯ ನಿರ್ಮಿಸಲು ಸರ್ವೆ ಸಮೀಕ್ಷೆ ಕೈಗೊಳ್ಳಲು ರೂ 14.30 ಕೋಟ ಮೊತ್ತದ ಅಂದಾಜುಆಡಳಿತಾತ್ಮಕ ಅನುಮೋದನೆ. 7. 20 ಕೋಟಿ ರೂ ವೆಚ್ಚದಲ್ಲಿ ಶಿವಮೊಗ್ಗದ ಹೊಳೆಬನಸವಾಡಿ ತುಂಗಾ ನದಿಯಿಂದ ಎತ ನೀರಾವರಿ ಯೋಜನೆ ಯಡಿ ಹಲವು ಗ್ರಾಮಗಳಲ್ಲಿ 21 ಕೆರೆ ತುಂಬಿಸುವ ಯೋಜನೆ. 8. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಯೋಜನೆ ಕಾಮಗಾರಿಗೆ ತಾತ್ವಿಕ ಅನುಮೋದನೆ ನೀಡಿ 250 ಕೋಟಿ ಮತ್ತದ ಆಡಳಿತಾತ್ಮಕ ಅನುಮೋದನೆ. 9. 25.85 ಕೋಟಿ ರೂ . ವೆಚ್ಚದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಇಲ್ಲಿ ಸುತ್ತಮುತ್ತ ಗ್ರಾಮಗಳ ಕೆರೆಗಳಿಗೆ ಕಡ್ಡಾಯದ ಏತ ಈ ಯೋಜನೆ ಮೂಲಕ ನೀರು ಹರಿಸಲು ಕಾಮಗಾರಿಗಳಿಗೆ ಚಾಲನೆ.

ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆಯನ್ನು ನಡೆಸಿದ ಹೆಗ್ಗಳಿಕೆ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ
1. ರಾಜ್ಯದಲ್ಲಿ ಮಳೆಯಿಂದಾಗಿ ಸರ್ಕಾರಿ ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು , ಸದರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ನಬಾರ್ಡ್ ಸಹಯೋಗ ದಡಿ ಆರ್ ಐಡಿ ಎಫ್ 25 ನಿಯಮದ ಅಡೀ 29 ಜಿಲ್ಲೆಗಳಲ್ಲಿ 3243 ಸರ್ಕಾರಿ ಶಾಲೆಗಳ 6143 ಕೊಟಡಿಗಳ ಮರು ನಿರ್ಮಾಣ ಕಾಮಗಾರಿಗೆ ರೂ .78 67 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
2. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ( UVCE ) ಪ್ರತ್ಯೇಕ ಸ್ವಾಯತ್ತತೆ ನೀಡಿ , IIT ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ.
3. 2019-20ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವರ್ಗದ ಅರ್ಹ 108816 ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ .
4. 2020 ಹಾಗೂ 21 ನೆ ಶೈಕ್ಷಣಿಕ ಸಾಲಿನ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಇಂಜನಿಯರಿಂಗ್ ಕಾಲೇಜು ಹಾಗೂ ವಿಜಯಪುರ ಅಲ್ಲಿ ಬಸವನಬಾಗೇವಾಡಿಯಲ್ಲಿ ಸರ್ಕಾರಿ ಪಾಲಟಿಕ್ನಿಕ್ಸ್ ಸಂಸ್ಥೆಯನ್ನು ಪ್ರಾರಂಭಿಸಲು ಎ,ಐ,ಸಿ,ಟಿ,ಈ ವತಿಯಿಂದ ಅನುಮೋದನೆ.
5. ಆರೋಗ್ಯ ಕರ್ನಾಟಕದ ಅಡಿ ಇಲ್ಲಯವರೆಗೆ 5,88,721 ಫಲಾನುಭವಿಗಳಗೆ ರೂ . 950 ಕೋಟಿಗಳ ವೆಚ್ಚದಲ್ಲಿ ಚಿಕಿತ್ಸೆ , ಒಟ್ಟು 400 ಮಿಸಲು ಆಸ್ಪತ್ರೆಗಳು , 2,807 ಸರ್ಕಾರಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ” 32,841 ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ.
6. ಸಮಾಜಕಲ್ಯಾಣ ಸತ್ಯ ಹಾಡಿ ಪಲಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಎಸ್‌ಸಿ/ ಎಸ್ ಟಿ ಯೋಜನೆಯಡಿ ರೂ . 270586 ಕೋಟಿ ನೀಡಿದೆ

8,9,10 ನೇ ತರಗತಿಗಾಗಿ ಪೂರ್ವಭಾವಿ ಸಿದ್ಧತೆ, ಚಂದನ ವಾಹಿನಿ ಮೂಲಕ ಪಾಠ ಪ್ರವಚನ
1. ಕೋರೊನಾ ಹಿನ್ನೆಲೆಯಲ್ಲಿ 8,9 ಮತ್ತು 7 ನೇ ತರಗತಿಗಳಿಗೆ ಚಂದನ ವಾಹಿನಿ ಯಲ್ಲಿ ಕಾರ್ಯಕ್ರಮಗಳ ವೀಡಿಯೋ ತರಗತಿಯನ್ನು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರ ಮಾಡಲು ಎಲ್ಲ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ. 2. ಒಂದು ತರಗತಿ ಇಂದ ಮತ್ತೊಂದು ತರಗತಿಗೆ ತೇರ್ಗಡೆ ಹೊಂದುವ ಮಕ್ಕಳಗೆ ಹಿಂದಿನ ತರಗತಿಗಳ ಪಾಠಗಳನ್ನು ನೆನಪಿಸಿ ಮುಂದಿನ ತರಗತಿಗಳಿಗೆ ಸಿದ್ಧಗೊಳಸುವ ಸೇತುಬಂಧ ಮತ್ತು ಕಲಿಕೆಯನ್ನು ಸಮಗ್ರವಾಗಿಸುವ ನಿಟ್ಟಿನಲ್ಲಿ ಒಂದು ಪರಿಪೂರ್ಣ ಕಾರ್ಯಕ್ರಮವಾಗಿದ್ದು ಈ 5 ನೇ ತರಗತಿಯ ವಿಡಿಯೋ ತರಗತಿಗಳು ಚಂದನ ವಾಹಿನಿಯಲ್ಲಿ ಆರಂಭ ಮಾಡಿದೆ. 3. ಶಿಕ್ಷಣ ಇಲಾಖೆಯಿಂದಲೇ ಒಂದು ಪ್ರತ್ಯೇಕ ಚಾನಲ್ ಪ್ರಾರಂಭಕ್ಕೆ ಪ್ರಯತ್ನಗಳು ನಡೆದಿವೆ ರಾಷ್ಟ್ರೀಯ ಆಯ್ದ ಸ್ಥಳಗಳಲ್ಲಿ ಇಲಾಖೆ ಆಶ್ರಯದಲ್ಲಿ ಹೊಸ ನಿರಂತರ ನಿರ್ಮಾಣಕ್ಕೆ ಅನುಮೋದನೆ ನೀಡುವ ಮೂಲಕ ಎಲ್ಲ ತರಗತಿಗಳ ಕಲಿಕೆ ಪ್ರಾರಂಭ ವಾಗಲಿದೆ.
ಅಭಿವೃದ್ಧಿ ಕೆಲಸ ಹಾಗೂ ಸಮಸ್ಯೆಗಳ ಸುಳಿಯಲ್ಲಿ ಸಿಎಂ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಕಳೆದಿದೆ.