ಬೆಳಗಾವಿ: ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಯ ಈ ಶುಭ ಸಂದರ್ಭದಲ್ಲಿ ರಾಮತೀರ್ಥ ನಗರದಲ್ಲಿರುವ ಶಿವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ , ಭಾರತೀಯ ಜನತಾ ಪಾರ್ಟಿ ಹಾಗೂ ರಾಮತೀರ್ಥ ನಗರದ ರಹವಾಸಿಗಳಿಂದ ಇಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಜರುಗಿತು.
ಮಹಾ ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಈ ಸಮಯದಲ್ಲಿ ಮಾತನಾಡಿದ ಮಹಾಂತೇಶ ವಕ್ಕುಂದ ಹಿಂದೂಗಳ ನೂರಾರು ವರ್ಷಗಳ ಕನಸು ಇಗ ನನಸಾಗುತ್ತಿದೆ ಯಾಗುತ್ತಿದೆ ಎಂದರೂ ಈ ಸಂಧರ್ಭದಲ್ಲಿ ಮಹಾಂತೇಶ ವಕ್ಕುಂದ, ಈರಯ್ಯ ಖೋತ, ಆನಂದ ಕರಲಿಂಗನ್ನವರ, ಸುರೇಶ ಯಾದವ, ಕೇದಾರ ಜೋರಾಪುರ, ರೋಹನ ಜಾಧವ, ಶಿವಪ್ಪ ಕಿವಡಸಣ್ಣವರ, ಮಲ್ಹಾರ ದೀಕ್ಷಿತ, ಮಹಾದೇವ ಟೊನ್ನೆ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.