ದೇಸೂರ ಗ್ರಾಮ ಪಂಚಾಯತಿಯಲ್ಲಿ ಜಾತಿ ನಿಂದನೆ ಮಾಡಿದ ಸದಸ್ಯ ಸತೀಶ ಚವ್ಹಾಣ ವಿರುದ್ದ ಪ್ರತಿಭಟನೆ.

  • 15 Jan 2024 , 2:59 AM
  • Belagavi
  • 144

ಬೆಳಗಾವಿ: ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆ ಹಿಂದೂಳಿದ ವರ್ಗ ಪರಿಶಿಷ್ಟ ಪಂಗಡದವರೆಂದು ಜಾತಿ ನಿಂದನೆ ಹಾಗೂ ಅಧ್ಯಕ್ಷರಿಗೆ ಅವಮಾನ ಮಾಡುವುದಲ್ಲದೆ ಮತ್ತು ನಿಂದಿಸಿರುವ ಘಟನೆ ನಡೆದಿದೆ.

ಹೌದು ಬೆಳಗಾವಿ ತಾಲೂಕಿನ ದೇಸೂರ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಅಧ್ಯಕ್ಷರು ಹಿಂದೂಳಿದ ವರ್ಗ ಎಂದು ದೇಸೂರ ಗ್ರಾಮ ಪಂಚಾಯತಿ ಸದಸ್ಯ ಸತೀಶ ರಾಮಜಿ ಚವ್ಹಾಣ ಅವರು ಮಹಿಳಾ ಅಧ್ಯಕ್ಷರ ಕುರ್ಚಿ ಮೇಲೆ ಕುಳಿತು ಅವರ ಅಧ್ಯಕ್ಷ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ರಾಜ್ಯ ಯುವ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

ಅಧ್ಯಕ್ಷರ ಕುರ್ಚಿ ಮೇಲೆ ಕುಳಿತು ಮತ್ತು ಅಧ್ಯಕ್ಷರಾದ ಲಕ್ಷ್ಮೀ ದೇಮಪ್ಪಾ ಪೀರನವಾಡಿ ಇವರಿಗೆ ಅಸಭ್ಯ ವರ್ತನೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿ ಸದಸ್ಯ ಸತೀಶ ರಾಮಜಿ ಚವ್ಹಾಣ ವಿರುದ್ಧ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡಾ ಯಾವುದೇ ರೀತಿಯಲ್ಲಿ ಕ್ರಮ ಜರುಗಿಸಿರುವುದಿಲ್ಲ ಆದ್ದರಿಂದ ಸದಸ್ಯನ ವಿರುದ್ದ ಕ್ರಮತೆಗೆದುಕೊಂಡು ಸದಸ್ಯತ್ವ ರದ್ದು ಪಡಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Read All News