ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ನೆರವಾಗಲು ಮುಂದಾದ ಪೃಥ್ವಿ ಸಿಂಗ್ ಪೌಂಡೇಶನ ಮುಖ್ಯಸ್ಥ ಪೃಥ್ವಿ ಸಿಂಗ್.

  • 15 Jan 2024 , 3:35 AM
  • Belagavi
  • 161

ಬೆಳಗಾವಿ: ಪೃಥ್ವಿ ಸಿಂಗ್ ಫೌಂಡೇಶನ್ ವತಿಯಿಂದ ಇಂಜಿನಿಯರ್ಸ್ ಕಂಪ್ಯೂಟರ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ ಹಣಕಾಸಿನ ನೆರವು, ಅನಾರೊಗ್ಯದಿಂದ ಬಳಲುತ್ತಿದ್ದ ಕುಟುಂಬಕ್ಕೆ ನೆರವಿನ ಹಸ್ತ ಚಾಚಲು ಮುಂದಾದ ಪೃಥ್ವಿ ಸಿಂಗ್ ಪೌಂಡೇಶನ ಹಾಗೂ ನಗರದಲ್ಲಿನ ಫೇಸ್ಬುಕ್ ಪ್ರೇಂಡ್ಸ ಸರ್ಕಲ್,

ಹೌದು ಬೆಳಗಾವಿ ನಗರದಲ್ಲಿನ ಶಹಾಪೂರ ಜೇಡಗಲ್ಲಿಯಲ್ಲಿನ ಇಂಜನೀಯರಿಂಗ್ ಕಂಪ್ಯೂಟರ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಆರ್ಥಿಕವಾಗಿ ಅನೇಕ ಸಮಸ್ಯೆ ಅನುಭವಿಸುತ್ತಿದ್ದು ಹಾಗೇ ಇವರ ತಾಯಿ ಕೂಡಾ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ತಂದೆ ಕೂಡಾ ಸತೀಶ್ ಮಿರಾಜ್ಕರ್ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾರೆ ವಿದ್ಯಾರ್ಥಿ ತಂದೆ 6000 ವೇತನ ಇದ್ದು ಮನೆ ಬಾಡಿಗೆ 3000 ಇದೆ ಆದ್ದರಿಂದ ತಾಯಿ ಕೂಡಾ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ಹಣ ಇಲ್ಲದೆ ಹಾಗೂ ವಿದ್ಯಾರ್ಥಿ ಕೂಡಾ ಅನೇಕ ಸಮಸ್ಯೆ ಅನುಭವಿಸುತ್ತಿರುವುದನ್ನ ಗಮನಿಸಿದ ದಾನಿಗಳು ತಕ್ಷಣ ಆ ಕುಟುಂಬಕ್ಕೆ ಹೋಗಿ ಆ ವಿದ್ಯಾರ್ಥಿಗೆ ಉಚಿತವಾಗಿ ಶಿಕ್ಷಣ ಕೂಡಿಸುವಂತೆ .ಪೃಥ್ವಿ ಸಿಂಗ್ ಪೌಂಡೇಶನ ಸಂಸ್ಥಾಪಕ ಪೃಥ್ವಿ ಸಿಂಗ್ ಅವರು ಕಂಪ್ಯುಟರ್ ಅಕಾಡೆಮಿ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡರು ತಕ್ಷಣ ಅಕಾಡೆಮಿಯವರು ಹಣ ತೆಗೆದುಕೊಳ್ಳದೆ ದಾಖಲಾತಿ ಮಾಡಿಕೊಂಡರು.

ನಂತರ ಆ ಕುಟುಂಬಕ್ಕೆ ಒಂದು ತಿಂಗಳವರೆಗೆ ಆಗುವ ಆಹಾರ ಧಾನ್ಯಗಳನ್ನ ನೀಡಿದರು.ನಂತರ ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಇವರ ತಾಯಿಗೆ ಔಷಧ ತರಲು ಹಣವನ್ನ ಕೂಡಾ ನೀಡಲಾಯಿತು.

ಈ ಸಂದರ್ಭದಲ್ಲಿ ಫೇಸ್‌ಬುಕ್ ಪ್ರೇಂಡ್ಸ ಸರ್ಕಲನ ಮುಖ್ಯಸ್ಥ ಸಂತೋಷ್ ದಾರೆಕರ್ ಮತ್ತು ಪೃಥ್ವಿ ಸಿಂಗ್ ಫೌಂಡೇಶನ್ ಮುಖ್ಯಸ್ಥ ಪೃಥ್ವಿ ಸಿಂಗ್ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.

Read All News