ಬೆಳಗಾವಿ: ಐನೂರು ವರ್ಷಗಳಿಂದ ಅಯೋಧ್ಯಾ ದಲ್ಲಿ ರಾಮ ಮಂದಿರ ಆಗಬೇಕು ಅನ್ನುವಂತ ಹೋರಟಕ್ಕೆ ಇಂದು ಶುಭಗಳಿಗೆ ಕೂಡಿ ಬಂದಿದೆ. ಇಂದು ಬೆಳಗಾವಿ ಉತ್ತರ ಭಾಗ ಶಾಸಕ ಅನೀಲ ಬೆನಕೆ ಅವರು ಶ್ರೀರಾಮನ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಭಿನಂದೆ ಸಲ್ಲಿಸಿ ಮಾತನಾಡಿದ ಅವರು ರಾಷ್ಟ್ರದ ಹಲವು ಸಂಘಟನೆಗಳು ಹಲವಾರು ವರ್ಷಗಳಿಂದ ಹೋರಟ ಮಾಡುತ್ತಾ ಬಂದಿವೆ ಇದಕ್ಕೆ ಇಂದು ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಸನ್ಮಾನ್ಯ ಪ್ರಧಾನಿ ಮೋದಿ ಯವರ ನೇತೃತ್ವದಲ್ಲಿ ಅವಕಾಶ ಸಿಕ್ಕಿದೆ.
ಈ ಶುಭ ಸಮಾರಂಭದಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸ್ವಯಂ ಸಂಘದ ಸರಸಂಘ ಚಾಲಕ ಮೋಹನ್ ಜೀ ಭಾಗವತ್,ಸಿಎಂ ಯೋಗಿ ಆದಿತ್ಯ ನಾಥ,ಅಡ್ವಾಣಿ ಹಾಗೂ ಸಾಧು ಸಂತರ ಅಮೃತ ಹಸ್ತದಿಂದ ನೇರೆವೇರಿದೆ ಇವರಿಗೆ ಹೃತ್ಪುರಕ ಅಭಿನಂದನೆ ಸಲ್ಲಿಸಿದರು. ಬೆಳಗಾವಿ ಹಾಗೂ ಅಯೋಧ್ಯಾ ನಂಟು ಹಲವು ವರ್ಷಗಳಿಂದಲು ಇದೆ ಹಿಂದಿ ಬಹು ದಿನಗಳ ಹಿಂದೂಗಳ ಕನಸು ಇಂದು ನನಸಾಗಿದೆ ಎಂದು ಹೇಳಿದರು.