ರಾಜ್ಯದಲ್ಲಿ ಮತ್ತೆ ಕತ್ತಿ ವರಸೆ ಪ್ರಾರಂಭ
- 15 Jan 2024 , 3:47 AM
- Bengaluru
- 123
ರಾಜ್ಯದಲ್ಲಿ ಕೋರೊನಾ ದಿನೆ ದಿನೆ ಹೆಚ್ಚುತ್ತಿದೆ ಇಂತಹ ಸಮಯದಲ್ಲು ಸಹ ರಾಜ್ಯದಲ್ಲಿ ರಾಜಕೀಯ ಹಗ್ಗ ಜಗ್ಗಾಟ ಪ್ರಾರಂಭ ವಾಗಿದೆ. ಬಿಜೆಪಿ ತಮ್ಮ ತಮ್ಮ ನಾಯಕರಲ್ಲೆ ರಾಜಕೀಯ ಆಟ ಶುರುವಾಗಿದೆ ಬೆಳಗಾವಿಯ ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಮತ್ತು ತಮ್ಮನಿಗೆ ರಾಜ್ಯಸಭಾ ಟಿಕೆಟ್ ಸಹ ಸಿಗಲಿಲ್ಲ ಇದರ ಕಾರಣ ಸಚಿವ ಸ್ಥಾನವು ಸಿಗಬೇಕು ತಮ್ಮನಿಗೆ ರಾಜ್ಯಸಭಾ ಸದಸ್ಯ ಮಾಡಬೇಕೆಂದು ಪಟ್ಟು ಹೀಡಿದು ಕುಳತಿದ್ದಾರೆ.
ರಮೇಶ ಕತ್ತಿಗೆ ಲೋಕಸಭಾ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ರಾಜ್ಯ ಸಭಾ ಸದಸ್ಯ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದರು ಇಗ ಬೆಳಗಾವಿ ರಾಜಕಾರಣ ಮತ್ತೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ಪ್ರಭಾಕರ್ ಕೋರೆ ರಾಜ್ಯಾ ಸಭಾ ಸ್ಥಾನ ಉಳಿಸಿಕೊಳ್ಳಲು ಬೆಂಗಳೂರಿಗೆ ದಿಢೀರ್ ದೌಡಾಯಿಸಿದ್ದಾರೆ ಕೋರೆ ಬೆಂಬಲಕ್ಕೆ ಲಕ್ಷ್ಮಣ ಸವದಿ,ಶಾಸಕಿ ಶಶಿಕಲಾ ಜೊಲ್ಲೆ ನಿಲ್ಲುವ ಸಾದ್ಯತೆ ಇದೇ. ಆರ್ ಎಸ್ ಎಸ್ ಆಪ್ತರಾಗಿರುವ ಜೊಲ್ಲೆ ಕುಟುಂಬ ಕೋರೆ ಬೆಂಬಲಕ್ಕೆ ನಿಲ್ಲಲಿದ್ದಾರೆ. ಒಂದು ಕಡೇ ಪ್ರಭಾಕರ್ ಕೋರೆಗೆ ಉಮೇಶ ಕತ್ತಿ ರಾಜಕೀಯ ದಾಳವನ್ನೆ ಉರಳಿಸದ್ದಾರೆ.