ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಗೆ ಅದ್ದೂರಿ ಚಾಲನೆ

  • 15 Jan 2024 , 12:44 AM
  • Belagavi
  • 122

ಬೆಳಗಾವಿ: ಬೆಳಗಾವಿ ನಗರದಲ್ಲಿ ಶಿವಾಜಿ ಜಯಂತಿಯ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಶಿವಾಜಿ ಮಹಾರಾಜರ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ಉತ್ತರ ಶಾಸಕ ಅನಿಲ ಬೆನಕೆ ಹಾಗೂ ದಕ್ಷಿಣ ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಹಾಗೂ ಪೊಲೀಸ್ ಕಮಿಷನರ್ ಬೋರಲಿಂಗಯ್ಯ ಚಾಲನೆ ನೀಡಿದರು.

ನಗರದ ಕಂಬ್ಳಿಕೂಟದಿಂದ ಹೊರಟ ಮೆರವಣಿಗೆ ಆರಂಭವಾಗಿ 'ಜೈ ಶಿವಾಜಿ–ಜೈ ಭವಾನಿ’ ಎಂಬ ಘೋಷಣೆಗಳ ಮಧ್ಯೆ ಆರಂಭವಾದ ಮೆರವಣಿಗೆ 70 ಕ್ಕೂ ಅಧಿಕ ಶಿವಾಜಿಯ ಇತಿಹಾಸ ಸಾರುವ ಕಲಾಕೃತಿಗಳ ಮೆರವಣಿಗೆ ಶಿವಾಜಿ ಮಹಾರಾಜರ ವೇಷಧಾರಿಗಳು ನೋಡುಗರ ಕಣ್ಮನ ಸೆಳೆದವು.

ಮೆರವಣಿಗೆಯಲ್ಲಿ ವಾಧ್ಯಮೇಳಗಳು, ದೇಸಿ ಸೊಗಡಿನ ಢೋಲ-ತಾಷಾ, ಝಾಂಜ್ ಪಥಕಗಳ ಮೆರುಗು ವಿವಿಧ ಬಡಾವಣೆಗಳ ಸಂಘ ಹಾಗೂ ಮಂಡಳಿಗಳು ರೂಪಕಗಳು ಭಾಗಿವಾಗಿದ್ದವು. ತಡರಾತ್ರಿವರೆಗೂ ನಡೆಯುವ ಮೆರವಣಿಗೆ ನಡೆಯಲಿದೆ.

Read All News