ಮೈ ಜುಮ್ ಅನ್ನಿಸುವಂತಿದೆ ಗೋಕಾಕ್ ಫಾಲ್ಸ್

  • 15 Jan 2024 , 1:33 AM
  • Belagavi
  • 128

ಗೋಕಾಕ: ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಮುನ್ಸೂಚನೆ ನೀಡುತ್ತಿದೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ರಾಜ್ಯದ ಜನತೆ ತತ್ತರಿಸಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿಯೆ ಸದ್ದು ಮಾಡುತ್ತಿದ್ದು ಮತ್ತೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭಿತಿ ಎದಾರುಗುತ್ತಿದೆ.

ಭಾರತದ ನಯಾಗಾರ ಫಾಲ್ಸ್ ಎಂದು ಖ್ಯಾತಿ ಗಳಿಸಿದ ಗೋಕಾಕ್ ಫಾಲ್ಸ್ ಈ ಜಲಧಾರೆಯ ಸೌಂದರ್ಯವನ್ನು ನೋಡಿದರೆ ಮೈ ಜುಮ್ ಅನ್ನಿಸುವಂತಿದೆ ಗೋಕಾಕ್ ಫಾಲ್ಸ್ ನಿಂದ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯವನ್ನ ಸವಿಯೋಕೆ ಗೋಕಾಕ್ ಫಾಲ್ಸ್ ಬಳಿ ಇಲ್ಲದಂತಾದ ಪ್ರವಾಸಿಗರು. ಘಟಪ್ರಭಾ ನದಿಗೆ ಹರಿದು ಬರುತ್ತಿರುವ ಭಾರೀ ಪ್ರಮಾಣದ ನೀರು ಹಾಲಿನ ನೊರೆಯಂತೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಸತತ ಮಳೆ ಮತ್ತು ಎದೆ ನಡುಗಿಸುವ ರೀತಿಯಲ್ಲಿ ನದಿ, ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ ನದಿ ಪಾತ್ರದ ಜನರಲ್ಲಿ ಆತಂಕ ವಾತಾವರಣ ಸೃಷ್ಟಿಯಾಗಿದೆ .

Read All News