ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿವರ್ತನೆ ಹಾಗೂ ಸುಧಾರಣೆ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯ ಭಾಷಣ

  • 15 Jan 2024 , 6:45 AM
  • Delhi
  • 103

ನವದೆಹಲಿ : ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ಸಮಾವೇಶದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಮೂರನಾಲ್ಕು ವರ್ಷಗಳ ಸುದೀರ್ಘ ಚರ್ಚೆ ನಂತ್ರ ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಶಿಕ್ಷಣದಲ್ಲಿ  ಬದಲಾವಣೆ ತರಬೇಕಾಗಿದೆ  ಕೌಶಲ್ಯಾಭಿವೃದ್ಧಿ ವಿಚಾರಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಇಷ್ಟವಾದುದನ್ನೆ ಕಲಿಯಬೇಕು. ಐದನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಹೊಸ ಶಿಕ್ಷಣ ವ್ಯವಸ್ಥೆ ದೇಶದ ಯುವಕರನ್ನು ಇನ್ನಷ್ಟು ಕೌಶಲ್ಯವೃದ್ಧಿಯನ್ನಾಗಿಸುತ್ತದೆ. ಈ ಕ್ರಾಂತಿಕಾರಕ ಶಿಕ್ಷಣ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಲಿದ್ದು , ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು ಎಂದರು. ಪುಸ್ತಕಗಳ ಹೊರೆ ಕಡಿಮೆ ಮಾಡಿರುವ ಈ ಯೋಜನೆಯು ವಿದ್ಯಾರ್ಥಿಗಳ ಆಸಕ್ತಿ ಆಧಾರದ ಮೇಲೆ ಕಲಿಕೆಯ ಸ್ವಾತಂತ್ರ್ಯ ಕೊಟ್ಟಿರುವುದು ವಿಶೇಷ ಎಂದರು. ಕಲಿಕೆಯ ಮಧ್ಯೆ ತಾನು ಓದುವ ವಿಷಯದ ಮೇಲೆ ಆಸಕ್ತಿ ಇಲ್ಲದಿದ್ದರೆ ಅದನ್ನು ಬದಲಾಯಿಸುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ದೇಶದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಶಿಕ್ಷಣ ಬದುಕು ರೂಪಿಸುವಂತಾಗಬೇಕು ಆಗ ಮಾತ್ರ ಕಲಿಕೆ ಸಾರ್ಥಕವಾಗುತ್ತದೆ. ಈಗ ಭಾರತದ ಶಿಕ್ಷಣ ನೀತಿಯ ಕಡೆಗೆ ಎಲ್ಲರ ಗಮನವೂ ಇದೆ. ಈ ಶಿಕ್ಷಣ ನೀತಿ ಭಾರತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ, ಯಶಸ್ವಿಯಾಗಿ ಮುನ್ನಡೆಸಲಿದೆ ಈ ನಿಟ್ಟಿನಲ್ಲಿ ನಮ್ಮ ನಡೆ ಶುರುವಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಶೀಘ್ರದಲ್ಲಿಯೇ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಇದನ್ನು ಜಾರಿಗೆ ತರಲು ಬೇಕಾದ ಎಲ್ಲ ಸಹಾಯವನ್ನು ನಾನು ಮಾಡಬಲ್ಲೆ ಎಂದು ಮೋದಿ ಭರವಸೆ ನೀಡಿದರು.

Read All News