ಕೋಜಿಕ್ಕೋಡ್ : ದುಬೈನಿಂದ ಕ್ಯಾಲಿಕಟಗೆ (ಕೋಜಿಕ್ಕೋಡ್) ಆಗಮಿಸಿದ್ದ ಏರ ಇಂಡಿಯಾ ವಿಮಾನ ಕ್ಯಾಲಿಕಟ್ ರನ್ವೇ ಯಲ್ಲೆ ದುರಂತಕ್ಕಿಡಾಗಿದೆ. ವಿಮಾನದಲ್ಲಿದ್ದ 191 ಜನರೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ AXB1344,B737 ವಿಮಾನವು ಕೇರಳದ ಕ್ಯಾಲಿಕಟ್ ಇಳಿಯುವಾಗ ಎರಡು ತುಂಡಾಗಿದೆ. ಈ ಘಟನೆಯಲ್ಲಿ ಪೈಲಟ್ 'ಸಾಕ್ಕೆ' ಸೇರಿ ಕೆಲವು ಪ್ರಯಾಣಿಕರು ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅನೇಕ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಘಟನೆ ಸಂಜೆ 7: 40 ರ ಸುಮಾರಿಗೆ ನಡೆದಿದೆ.