ಬೆಳಗಾವಿ : ಷಣ್ಮುಖಾರೂಢ ಮಠ ವಿಜಯಪುರ ಹಾಗೂ ಶಾಂತಾಶ್ರಮ, ಹುಬ್ಬಳ್ಳಿಯ ಮಠದ ಪೀಠಾಧಿಪತಿಗಳಾದ ಶಿವಪುತ್ರ ಮಹಾಸ್ವಾಮಿಗಳು (೬೪) ಶುಕ್ರವಾರ ರಾತ್ರಿ ೮.೩೦ ಗಂಟೆಗೆ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಕಳೆದ ಎರಡು ದಿನಗಳಿಂದ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆ ಇಂದು ಸಂಜೆ ನಗರದ ಕೆ.ಎಲ್.ಇ ಆಸ್ಪತ್ರೆಗೆ ಕರೆತರಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ೮.೩೦ ಕ್ಕೆ ಲಿಂಗೈಕ್ಯರಾದರು ಎಂದು ಶ್ರೀಮಠದ ಉತ್ತರಾಧಿಕಾರಿಗಳಾದ ಅಭಿನವ ಸಿದ್ಧಾರೂಢ ಸ್ವಾಮೀಜಿಯವರು ತಿಳಿಸಿದ್ದಾರೆ. ಪೂಜ್ಯರ ಸಮಾಧಿಕ್ರಿಯೆ ನಾಳೆ ಶನಿವಾರ (ಆ.೮) ಮಧ್ಯಾಹ್ನ ೩ ಗಂಟೆಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಳಿಯ ಶಾಂತಾಶ್ರಮದ ಆವರಣದಲ್ಲಿ ನೆರೆವೇರಲಿದೆ. ಎಂದು ತಿಳಿದು ಬಂದಿದೆ.