ಹುಬ್ಬಳ್ಳಿ: ಷಣ್ಮುಖಾರೂಢ ಮಠ ವಿಜಯಪುರ ಹಾಗೂ ಶಾಂತಾಶ್ರಮ, ಹುಬ್ಬಳ್ಳಿಯ ಮಠದ ಪೀಠಾಧಿಪತಿಗಳಾದ ಶಿವಪುತ್ರ ಮಹಾಸ್ವಾಮಿಗಳು (೬೪) ಶುಕ್ರವಾರ ರಾತ್ರಿ ೮.೩೦ ಗಂಟೆಗೆ ಹೃದಯಾಘಾತ ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ನಿಧನಕ್ಕೆ ಸಾಧು ಸಂಸ್ಥಾನಮಠ ಇಂಚಲದ ಶಿವಾನಂದ ಭಾರತಿ ಸ್ವಾಮಿಗಳು, ಬೀದರದ ಶಿವಕುಮಾರ ಸ್ವಾಮಿಗಳು , ಗದುಗಿನ ಡಂಬಳ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿತರರ ಗಣ್ಯರು, ಭಕ್ತ ಸಮೂಹ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.