ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ; ಸುರೇಶ ಅಂಗಡಿ
- 14 Jan 2024 , 10:20 PM
- Belagavi
- 133
ಬೆಳಗಾವಿ: ಬಿಜೆಪಿ ಪಕ್ಷದಲ್ಲಿ ಯಾವುದು ಭಿನ್ನಾಭಿಪ್ರಾಯವಿಲ್ಲ, ಯಾರಾದರು ಊಟಕ್ಕೆ ಕರೆದರೆ ಅದನ್ನು ಭಿನ್ನಮತ ಎನ್ನಲಾಗುವುದಿಲ್ಲ ಎಂದು ಬೆಳಗಾವಿಯಲ್ಲಿ ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಪಕ್ಷದ ಯಾವುದೇ ಶಾಸಕರಲ್ಲಿ ಅಸಮಾಧಾನವಿಲ್ಲ, ಪಕ್ಷದಲ್ಲಿ ಯಾವುದೇ ರೀತಿ ಭಿನ್ನಮತಕ್ಕೆ ಅವಕಾಶ ನೀಡುವುದಿಲ್ಲ ಏನಾದರೂ ಸಮಸ್ಯೆಗಳು ಕಂಡು ಬಂದ್ರೆ ಆಂತರಿಕವಾಗಿ ಬಗೆ ಹರಿಸಿಕೊಳ್ಳುತ್ತೆವೆ, ಭಿನ್ನಮತದ ಬಗ್ಗೆ ಮುಖ್ಯಮಂತ್ರಿಗಳು ಎಲ್ಲವನ್ನು ಬಗೆಹರಿಸಿಕೊಳ್ಳುತ್ತಾರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರಾದ ನಳಿನಕುಮಾರ್ ಇಬ್ಬರು ಸಮರ್ಥ ನಾಯಕರಿದ್ದಾರೆ. ಸರ್ಕಾರಕ್ಕೆ ಯಾವುದೇ ರೀತಿ ಸಮಸ್ಯೆಯಿಲ್ಲ ಇನ್ನೂ ಮೂರು ವರ್ಷ ಗಳ ಕಾಲ ಸರ್ಕಾರ ಸುಭದ್ರವಾಗಿರಲಿದೆ ಎಂದು ಭರವಸೆ ಮಾತುಗಳನ್ನು ಸುರೇಶ ಅಂಗಡಿ ಹೇಳಿದ್ದಾರೆ.