ಪರಿಷತ್ ಚುನಾವಣೆ: ಮತಗಟ್ಟೆಗಳ ಪಟ್ಟಿ ಪ್ರಕಟ

  • 15 Jan 2024 , 3:48 AM
  • Belagavi
  • 116

ಬೆಳಗಾವಿ: ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ-2022 ನೇದ್ದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 95 ಮತಗಟ್ಟೆಗಳ ಪ್ರಸ್ತಾವಣೆಗೆ ಮಾನ್ಯ ಭಾರತ ಚುನಾವಣಾ ಆಯೋಗ ನವದೆಹಲಿ ಇವರು ಅನುಮತಿ ನೀಡಿದ್ದು, ಮತಗಟ್ಟೆಗಳ ಪಟ್ಟಿಯನ್ನು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪ್ರಕಟಿಸಲಾಗಿರುತ್ತದೆ.

ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲದಾರ ಕಚೇರಿ, ಮಹಾನಗರ ಪಾಲಿಕೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ ಶಿಕ್ಷಣ ಇಲಾಖೆಯ ಸೂಚನೆ ಫಲಕದಲ್ಲಿ ನೋಡಲು ಲಭ್ಯವಿರುತ್ತದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read All News