ಶಾಸಕ ಬೆನಕೆ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಆರೋಪ

  • 14 Jan 2024 , 10:07 PM
  • Belagavi
  • 114

ಬೆಳಗಾವಿ: ವಾಯುವ್ಯ ಶಿಕ್ಷಕ ಹಾಗೂ ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಸರದಾರ್ಸ್ ಸರಕಾರಿ ಶಾಲೆಯಲ್ಲಿ ಮತದಾರರು ಮತದಾನ ಮಾಡಿದರು.

ರಾಷ್ಟ್ರೀಯ ಪಕ್ಷಗಳಿಗೆ ಸವಾಲ್ ಆಗಿರುವ ಈ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಹೇಳಲಾಗುತ್ತಿದ್ದು, ಅಭ್ಯರ್ಥಿಗಳ ಭವಿಷ್ಯ ಬರೆಯಲು‌ ಮತದಾರರು ಮತಗಟ್ಟೆಗೆ ಬಂದು ತಮ್ಮ ಮತವನ್ನು ಚಲಾವಣೆ ಮಾಡಿದರು.

ವಿಶ್ವೇಶ್ವರಯ್ಯ ನಗರದ ಮತಗಟ್ಟೆಯಲ್ಲಿಯೂ ಸಹ ಬಿರುಸಿನ ಮತದಾನ ನಡೆಯಿತು.

ಶಾಸಕ ಅನಿಲ ಬೆನಕೆ ಮತದಾನ ಕೊಠಡಿಯಲ್ಲಿ ಫೋನ್ ನಲ್ಲಿ ಮಾತನಾಡಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆ, ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತಹಾಕಿ ಗೆಲ್ಲಿಸಿಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

Read All News