ನದಿಯ ಒಡಲು ಬಿಟ್ಟು ನಾಡಿಗೆ ಹೆಜ್ಜೆ ಇಟ್ಟ ಕೃಷ್ಣೆ 

  • 15 Jan 2024 , 4:25 AM
  • Belagavi
  • 105

ಚಿಕ್ಕೋಡಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ ಜನ ಹೈರಾಣವಾಗಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ  ಕೃಷ್ಣಾ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದ್ದು, ರಾಜಾಪೂರ  ಬ್ಯಾರೆಜ್ ನಿಂದ ಇಗಾಗಲೇ ಎರಡು ಲಕ್ಷ ಕ್ಯುಸೆಕ್ ನೀರು ಬಂದಿದ್ದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ತೀರದ ಗ್ರಾಮಗಳು ಮುಳುಗಡೆಯಾಗುವ ಭೀತಿಯಲ್ಲಿವೆ. ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಜಲಾನಯನ ಪ್ರದೇಶದಲ್ಲಿ ಶುಕ್ರವಾರವೂ ಮಳೆ ಅಬ್ಬರ ಮುಂದುವರಿದಿದೆ, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಎರಡು ಮೂರು ದಿನದಲ್ಲಿ ಯಾವುದೇ ಕ್ಷಣದಲ್ಲಿ ಕ್ವೈನಾ ಜಲಾಶಯದಿಂದ ನೀರು ಬೀಡುವ ಸಾದ್ಯತೆ ಹೆಚ್ಚಾಗಿದೆ ಇದರಿಂದ ಕೃಷ್ಣಾ ನದಿ ತೀರ ಪ್ರದೇಶದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಜಲಾಶಯದಿಂದ ಹಂತ ಹಂತವಾಗಿ ಹೆಚ್ಚು ನೀರು ಬಿಡುವ ಮುನ್ಸೂಚನೆಯಿರುವ ಹಿನ್ನೆಲೆ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಾಗಿದೆ. ಮತ್ತೆ ಬೆಳಗಾವಿಯಲ್ಲಿ ನೂರಾರು ಗ್ರಾಮಗಳು ಮುಳುಗಡೆ ಯಾಗುವ ಸಾದ್ಯತೆ ಹೆಚ್ಚಿವೆ. ‌ಚಿಕ್ಕೋಡಿ ತಾಲೂಕಿನ ಹಲವು ಗ್ರಾಮಗಳು ಪ್ರವಾಹ ಎದುರಿಸುತ್ತಿವೆ. 

ಕೃಷ್ಣಾನದಿ ತೀರದ ಪ್ರದೇಶದಲ್ಲಿರುವ ಜನರು ಹಾಗು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ವಾಗುವಂತೆ ಪೋಲಿಸರು ಸಾರ್ವಜನಿಕರಿಗೆ ಮುನ್ಸೂಚನೆ ನೀಡುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಇಂಗಳಿ, ಯಡೂರವಾಡಿ, ಕಾಗವಾಡ ತಾಲೂಕಿನ ಜುಗೂಳು, ಬುದ್ನಾಳ,ಮಂಗಾವತಿ, ಶಹಾಪೂರ, ಬಣಜವಾಡ, ಅಂಕಲಿ ಗ್ರಾಮ ಗಳು ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ಕಾಗವಾಡ ಪೋಲಿಸರು ತಮ್ಮ ವಾಹನದ ಮೂಲಕ ಸಾರ್ವಜನಿಕರಿಗೆ ಎಚ್ಚರಿಸುತ್ತಿದ್ದಾರೆ.

Read All News