ಬೆಳಗಾವಿ :ಉದ್ಯಮಿ ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ವಿಶಾಲಸಿಂಗ್ ಚವಾಹಾಣ ಕಾಲಿಗೆ ಮಂಗಳವಾರ ಬೆಳ್ಳಂ ಬೆಳಗ್ಗೆ ಎಸಿಪಿ ನಾರಾಯಣ ಭರಮನಿ ಕಾಲಿಗೆ ಗುಂಡಿಕ್ಕಿದ್ದಾರೆ. ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಎಸಿಪಿ ನಾರಾಯಣ ಭರಮನಿ ಆರೋಪಿ ಕಾಲಿಗೆ ಗುಂಡಿಕ್ಕಿದ್ದಾರೆ.
ಆರೋಪಿಯ ಕೈಯಲ್ಲಿ ಕಂಟ್ರಿ ಪಿಸ್ತೂಲ್, ಮಾರಕಾಸ್ತ್ರಗಳು ಎಲ್ಲಿಂದ ಬಂದವು. ಜೈಲಿನಲ್ಲಿರುವ ಆರೋಪಿಗೆ ಸಹಕರಿಸಿದ್ದು ಯಾರು. ಎನ್ನುವುದು ಈಗ ಪೊಲೀಸ್ ತನಿಖೆಯಿಂದಲೇ ಹೊರಬರಬೇಕಿದೆ. ಕಾಲಿಗೆ ಗುಂಡೆಟ್ಟು ತಿಂದಿರುವ ಆರೋಪಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.