ಪುಡಾರಿಗಳಿಗೆ ನಡುಕ ಹುಟ್ಟಿಸಿದ ಸಿಂಗಂ..( ಬರಮನಿ)

  • 15 Jan 2024 , 2:05 AM
  • Belagavi
  • 198

ಬೆಳಗಾವಿ: ಕಳೆದ 15 ವರ್ಷಗಳ ಹಿಂದೆ ಬೆಳಗಾವಿ ಸೇರಿದಂತೆ ಮೂರು ರಾಜ್ಯಗಳನ್ನು ತನ್ನ ಕರಾಳ ದಂಧೆಗೆ ಬಳಸಿಕೊಳ್ಳುತ್ತಿದ್ದ ರೌಡಿಯ ಹುಟ್ಟು ಅಡಗಿಸಿದ್ದ ನಾರಾಯಣ ಬರಮನಿ ಇವತ್ತು ಮತ್ತೇ ಅದೇ ಖದರ್ ತೋರಿಸಿದ್ದು, ಈಗ ಪುಡಿ ರೌಡಿಗಳು ಬಾಲ ಬಿಚ್ವಲು ಹಿಂದೆ‌ ಮುಂದೆ ನೋಡುತ್ತಿದ್ದಾರೆ‌. ಬೆಳಗಾವಿಯ ಗಲ್ಲಿ, ಗಲ್ಲಿಯ ಮಾಹಿತಿ ಸೂಕ್ಷ್ಮವಾಗಿ ಅರಿತಿರುವ ನಾರಾಯಣ ಇಂದು ಬೆಳಗ್ಗೆ ಉಗ್ರಾವತಾರ ತಾಳಿ ನಗರದಲ್ಲಿನ ಪುಡಿ ರೌಡಿಗಳು ಬಾಲ ಮುದುಡಿಕೊಳ್ಳುವಂತೆ ಮಾಡಿದ್ದಾರೆ.

ಹೆಸರಿಗೆ ತಕ್ಕಂತೆ ಶಾಂತವಾಗಿ ಇರುವ ಬರಮನಿ ಪುಡಾರಿಗಳ ಹುಟ್ಟು ಅಡಗಿಸುವಲ್ಲಿ ಎತ್ತಿದ ಕೈ. ಸಾಮಾಜಿಕ ಕಳಕಳಿ ಹೊಂದಿರುವ ಅವರು ಮಾತೃ ಹೃದಯ ಮನುಷ್ಯ. ಕಿಡಿಗೇಡಿಗಳಿಗೆ ಸಿಂಹ ಸ್ವಪ್ನ ಆಗಿ ಕಾಡುವ ಅವರ, ಇಂದಿನ ಕಾರ್ಯ ಇಡೀ ರಾಜ್ಯ ಪೊಲೀಸ್ ಇಲಾಖೆಯೇ ಹೆಮ್ಮೆ ಪಡುತ್ತಿದೆ.

ಜನಪರ ಕಾಳಜಿ, ಇಲಾಖೆಯ ಮೇಲಿರುವ ಶಿಸ್ತು, ಗೌರವ, ನಾರಾಯಣ್ ನಿಗೆ ಶ್ರೀ ರಕ್ಷೆಯಾಗಿದೆ‌. ಬರಮನಿ ಬೆಳಗಾವಿ ಜಿಲ್ಲೆಯ ನಾಡಿ ಮಿಡಿತ ಅರಿತಿರುವ ಸಿಂಗಂ. ಆರೋಪಿಗಳು, ಕಿಡಿಗೇಡಿಗಳಿಗೆ ಸಿಂಹ ಸ್ವಪ್ನ. ಇದು ( ಬರಮನಿ) ಪೊಲೀಸ್ ಇಲಾಖೆಯ ಕಳಸ. ಬೆಳಗಾವಿ ಸಿಂಗಂ ಬರಮನಿ ಕಾರ್ಯಕ್ಕೆ ಕರುನಾಡಿನ ಜನತೆ ಸಲಾಂ ಹೊಡೆಯುತ್ತಿದೆ. ಇದು ಬರಮನಿ ದಕ್ಷ ಆಡಳಿತ ಮಾದರಿ.

Read All News