ಶಾಲಾ ದಾಖಲಾತಿ ಆಂದೋಲನ ಪ್ರಾರಂಭ: ಅಜಿತ

  • 15 Jan 2024 , 1:37 AM
  • Belagavi
  • 184

ಮೂಡಲಗಿ: ಶೈಕ್ಷಣಿಕವಾಗಿ ಮೂಡಲಗಿ ವಲಯವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇರುವ ಶಾಲೆಗಳಲ್ಲಿ ಶಾಲಾ ದಾಖಲಾತಿ ಹೆಚ್ಚಳ ಆಂದೊಲನ ಅಭಿಯಾನ ಹಮ್ಮಿಕೊಂಡಿರುವದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.

ಅವರು ಶುಕ್ರವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಕಡಿಮೆ ದಾಖಲಾತಿ ಹೊಂದಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಪ್ರಧಾನ ಗುರುಗಳ ಸಭೆಯಲ್ಲಿ ಮಾತನಾಡಿ, ವಲಯದಲ್ಲಿರುವ ಶಾಲೆಗಳಲ್ಲಿ ಗುಣಾತ್ಮಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ.

ಕಾರಣಾಂತರಗಳಿoದ ಕೇಲವು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ದಾಖಲಾತಿ ಕಡಿಮೆಯಾಗಲು ಪಟ್ಟಿಯನ್ನು ಸಿದ್ದಪಡಿಸಿಕೊಂಡು ಇನ್ನೂ ಹೆಚ್ಚಿನ ದಾಖಲಾತಿಯಾಗುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಒಂದು ವಾರದೊಳಗೆ ಸ್ಥಳೀಯರ ಸಹಕಾರದೊಂದಿಗೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು.

ಎಸ್.ಡಿ.ಎಮ್.ಸಿ, ಚುನಾಯಿತ ಪ್ರತಿ ನಿಧಿಗಳು, ಶಿಕ್ಷಣ ಪ್ರೇಮಿಗಳ ಹಾಗೂ ಪಾಲಕ ಪೋಷಕರ ಸಾರ್ವಜನಿಕ ಆಪ್ತಾಲೋಚನ ಸಭೆಗಳನ್ನು ಹಾಗೂ ಅವರ ಸಲಹೆ ಸೂಚನೆಗಳನ್ನು ಪಾಲಿಸಬೇಕು.

ಪತ್ರಗಳ ಮತ್ತು ಸಮೂಹ ಮಾದ್ಯಮಗಳ ಮೂಲಕ ಶಾಲೆಗಳ ಸಬಲಿಕರಣಗೋಳಿಸಲು ವಿನಂತಿಸಬೇಕು. ಖುದ್ದಾಗಿ ಇಂತಹ ಶಾಲೆಗಳಿಗೆ ಮಾರ್ಗದರ್ಶನ ಭೇಟಿ ನೀಡುವ ಯೋಜನೆ ಸಿದ್ದಪಡಿಸಲಾಗಿದೆ. ದಾಖಲಾತಿ ಹೆಚ್ಚಿಸಿದ ಶಾಲಾ ಮುಖ್ಯಸ್ಥರನ್ನು ಶಿಕ್ಷಣ ದಿನಾಚರಣೆಯಂದು ಸತ್ಕರಿಸಿ ಗೌರವಿಸಲಾಗುವದು ಎಂದು ಸಭೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಆಣಿ, ಪ್ರಧಾನಗುರು ಎಮ್.ಜಿ ಮಾವಿನಗಿಡದ ಸಭೆಯಲ್ಲಿ ಮಾತನಾಡಿ, ಪಾಲಕ ಪೋಷಕರ ಮನೆ ಭೇಟಿ ಮಾಡಿ ಸರಕಾರದ ಪ್ರೋತ್ಸಾಹಕ ಯೋಜನೆಗಳ ಕುರಿತು ಮನವರಿಕೆ ಮಾಡಿಕೊಡುವದು.

ಗ್ರಾಮೀಣ ಭಾಗದಲ್ಲಿರುವ ಶಾಲೆಗಳಲ್ಲಿ ಸಿಗುವ ಗ್ರಾಮೀಣ, ಕನ್ನಡ ಮಾದ್ಯಮ ಪ್ರಮಾಣ ಪತ್ರದಿಂದ ಶೈಕ್ಷಣಿಕ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿ ಕುರಿತು ತಿಳಿಸಬೇಕು. ಸರಕಾರಿ ಶಾಲೆಗಳು ಸರ್ವೋತೋಮುಖವಾಗಿ ಸಬಲಿಕರಣವಾಗುವ ನಿಟ್ಟಿನಲ್ಲಿ ಜ್ಞಾನದ ಶಕ್ತಿಯನ್ನು ವಿನಿಯೋಗಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ದಾಖಲಾತಿ ಹೆಚ್ಚಳ ಆಂದೋಲನ ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್. ಪ್ರಧಾನ ಗುರು ಎಸ್.ವಿ ಸೋಮವ್ವಗೋಳ, ಬಿಆರ್‌ಪಿ ಸುರೇಶ ಮೂಡಲಗಿ ಹಾಗೂ ಕಡಿಮೆ ದಾಖಲಾತಿ ಹೊಂದಿರುವ ಕಿರಿಯ ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಹಾಜರಿದ್ದರು.

Read All News