ಹಾಸನ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಬಾರಿ ಮಳೆ ಇಂದ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೆರಳಪೂರ ಗ್ರಾಮದಲ್ಲಿ ಅಸ್ತವ್ಯಸ್ತ ಉಂಟಾಗಿದೆ ಸಾಲಿಗ್ರಾಮದ ಕಡೆಗೆ ಹೋಗುವ ದಾರಿಯ ಪಕ್ಕದಲ್ಲಿ ಕಾವೇರಿ ನದಿಯಿಂದ ನೀರು ಸೇತುವೆಯ ಮೇಲೆ 2 ಅಡಿಯಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ ಇದಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನೀರಿನ ಒಳ ಹರಿವು ಹೆಚ್ಚಳವಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಮತ್ತು ಹಾರಂಗಿ ಜಲಾಶಯದಿಂದ ನೀರನ್ನು ಬಿಡಲಾಗಿದ್ದು ಈ ಕಾರಣ ನೀರಿನ ಓಳ ಹರಿವು ಹೆಚ್ಚಳವಾಗಿದೇ ಇದು ಹೀಗೆ ಮುಂದುವರೆದರೆ ಇನ್ನ ಅಕ್ಕ ಪಕ್ಕದ ಜಮೀನು ಮತ್ತು ಗ್ರಾಮಗಳು ಜಲಾವೃತವಾಗಲಿವೆ ಇದು ಹೀಗೆ ಮುಂದುವರೆದರೆ ವಾಹನ ಹಾಗೂ ಪ್ರಯಾಣಿಕರು ಸಂಚರಿಸಲು ತುಂಬಾ ತೊಂದರೆ ಯಾಗುತ್ತಿರುವದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.