ಶಿಂದೆ ಆಂಡ್ ಟೀಮಗೆ ನೀಡಿದ್ ಭದ್ರತೆ ಹಿಂಪಡೆದ್ ಮಹಾ ಸರ್ಕಾರ್ : ಗರಂ ಆದ್ ರೆಬಲ್ ಶಾಸಕ್

  • 14 Jan 2024 , 11:31 PM
  • Mahashtra
  • 102

ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಆದೇಶದ ಮೇರೆಗೆ ಶಿವಸೇನೆ ಶಾಸಕರ ರಕ್ಷಣೆಯನ್ನು ಹಿಂಪಡೆಯಲಾಗಿದೆ. ಅವರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಶಿಂದೆ ಪತ್ರದಲ್ಲಿ ಹೇಳಿದ್ದಾರೆ .

ನಾವು 2019 ರಲ್ಲಿ ನಡೆದ 14 ನೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಶಾಸಕಾಂಗದ ಆಯಾ ಕ್ಷೇತ್ರದಿಂದ ಯಥಾವತ್ತಾಗಿ ಶಾಸಕರಾಗಿ ಆಯ್ಕೆಯಾದ ಚುನಾಯಿತ ಸದಸ್ಯರು. ನಾವು ಪ್ರಸ್ತುತ ಹಾಲಿ ಶಾಸಕರು, ಆದರೆ, ನಮಗೆ ಮತ್ತು ನಮ್ಮ್ ಕುಟುಂಬ ಸದಸ್ಯರಿಗೆ ಪ್ರೋಟೋಕಾಲ್ ಪ್ರಕಾರ ನೀಡಿದ್ ಭದ್ರತೆಯನ್ನು ಸೇಡಿನ ಕ್ರಮವಾಗಿ ಮತ್ತು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ. ಈ ಕೆಟ್ಟ ನಡೆ ನಮ್ಮ ಸಂಕಲ್ಪವನ್ನು ಮುರಿಯುವ ಮತ್ತೊಂದು ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಸಂಜಯ್ ರಾವುತ್ ನೀಡಿದ ಸಂದರ್ಶನದ ಭಾಗವನ್ನು ಉಲೇಖಿಸಿದ್ ಶಿಂದೆ “ಎಲ್ಲಾ ಹೋದ ಶಾಸಕರು ಸದನಕ್ಕೆ ಬರಲಿ, ಆಮೇಲೆ ನೋಡೋಣ. ಈ ಶಾಸಕರು ವಾಪಸು ಬರೋದು ಕಷ್ಟ ಮತ್ತು ಮಹಾರಾಷ್ಟ್ರದಲ್ಲಿ ತಿರುಗಾಡುವುದು ಕಷ್ಟ ಎಂದು ರಾವತ್ ಹೇಳಿದ್ದಾರೆ ಎಂದು ಶಿಂದೆ ಬರೆದಿದ್ದಾರೆ .”

Read All News