ಹುಕ್ಕೇರಿ : ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಸದ್ಯಕ್ಕಿಲ್ಲ ಎಂದು ನೀರಾವರಿ ಅಧಿಕಾರಿ ಅರವಿಂದ ಕಣಗಿಲ್ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಎರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು ಜಲಾಶಯದ ಒಳಹರಿವು ಪ್ರಮಾಣ ಕೂಡ ಕಡಿಮೆ ಆಗಿದೆ. ಜಲಾಶಯದಲ್ಲಿ ಸದ್ಯ 45 ಟಿಎಂಸಿ ನೀರು ಸಂಗ್ರಹವಾಗಿದ್ದು ಜಲಾಶಯದ ಗರಿಷ್ಠ ಮಟ್ಟ 51 ಟಿಎಂಸಿ ಇದೆ. ಇನ್ನೂ 6 ಟಿಎಂಸಿ ನೀರುಬೇಕು ಆದ್ದರಿಂದ ನದಿಗೆ ನೀರು ಬಿಡುಗಡೆ ಸದ್ಯಕ್ಕಿಲ್ಲ. ಆದರೆ ಸ್ವಲ್ಪ ಪ್ರಮಾಣದಲ್ಲಿ ಕೆನಾಲಗಳ ಮೂಲಕ ಕೆರೆ ತುಂಬಲು ಮಾತ್ರ ನೀರು ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.