ಅಧಿಕಾರದ ಆಸೆಗೆ ಉದ್ಧವ್ ಕಾಂಗ್ರೆಸ್ ‌ಜೊತೆ ಕೈ ಸೇರಿಸಿದರು: ಸಚಿವ ಕಾರಜೋಳ

  • 15 Jan 2024 , 2:00 AM
  • Belagavi
  • 99

ಬೆಳಗಾವಿ :ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ. ಎನ್ ಸಿ ಪಿ, ಕಾಂಗ್ರೆಸ್, ಶಿವಸೇನೆ ಸೇನೆ ಸೇರಿ ಸರ್ಕಾರ ಮಾಡಿದೆ ಎಂದು ಸಚಿವ ಗೋವಿಂದ್ ಕಾರಜೋಳ ಹೇಳಿದರು. ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಾಳಾಸಾಹೇಬ್ ಠಾಕ್ರೆ ಮುಂಬೈನಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ ತಡೆಯುವ ನಿಟ್ಟಿನಲ್ಲಿ ಠಾಕ್ರೆ ಶಿವಸೇನೆ ರಚನೆ ಮಾಡಿದರು. ಶಿವಸೇನೆ, ಕಾಂಗ್ರೆಸ್ ಎಂದಿಗೂ ಸೇರಲು ಆಗಲ್ಲ. ಎರಡು ಪಕ್ಷಗಳು ಎಣ್ಣೆ, ನೀರು ಎಂದಿಗೂ ಸೇರಲು ಆಗಲ್ಲ.ಅಧಿಕಾರದ ಆಸೆಗೆ ಉದ್ಧವ ಠಾಕ್ರೆ ಕಾಂಗ್ರೆಸ್ ಜತಗೆ ಕೈಜೋಡಿದ್ದಾರೆ.
 

ಉದ್ಧವ‌ ಠಾಕ್ರೆ ವಿರುದ್ಧ ಅವರದೇ ಪಕ್ಷದ ಶಾಸಕರು ತಿರುಗಿಬಿದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತತ್ವ ಸಿದ್ದಾಂತ ಇಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಕಾದು ಎಂದರು. ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ವಿಕೃತಿ ಮನಸ್ಸಿನವರು ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನ.ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿಯಲ್ಲಿ ದಾಖಲೆ ನೀಡಲು ಆಗ್ರಹಿಸಿ ಎಂಇಎಸ್ ಪ್ರತಿಭಟನೆ. ಅರ್ಥ ಇಲ್ಲದ ಬೇಡಿಕೆ, ಅವರೇನು ಪಾಕಿಸ್ತಾನದವರು ಅಲ್ಲ.ಅವರು ನಮ್ಮವರೇ‌ ಇದ್ದಾರೆ.

ದುರಾಭಿಮಾನ ಬಿಟ್ಟು ನಮ್ಮ ಜತೆಗೆ ಬನ್ನಿ ಎಂದು ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಕನ್ನಡದಲ್ಲಿ ಆಡಳಿತರೋದ್ರಿ ಸಹಕರಿ ಎಂದು ಮನವಿ ಮಾಡ್ತಿವಿ ಎಂದರು.

Read All News