ಬೆಳಗಾವಿ: ಜಿಲ್ಲೆಯ ರೈತರ ಧನ, ಕರುಗಳು ಹಾಗೂ ಶ್ವಾನಗಳ ಆರೈಕೆಗಾಗಿ ಆಂಜನೇಯ ನಗರದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟದ ನಿರ್ಮಾಣವಾಗಿ ಆರು ತಿಂಗಳು ಕಳೆದರೂ ಇಲ್ಲಿಯವರೆಗೆ ಉದ್ಘಾಟನೆಯಾಗಿಲ್ಲ.
4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವೈದ್ಯಕೀಯ ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆ ಬೆಳಗಾವಿ, ಮೈಸೂರು, ತುಮಕೂರು, ಬೆಂಗಳೂರುಗೆ ಕಟ್ಟಡ ನಿರ್ಮಾಣ ಮಾಡಿ ಪಶುಗಳ ಚಿಕಿತ್ಸೆಗೆ ಮಂಜೂರು ಮಾಡಿದ್ದ ಸರಕಾರ ಉಳಿದ ಜಿಲ್ಲೆಗಳಲ್ಲಿ ಸೇವೆ ಆರಂಭಿಸಿರುವ ಪಶು ಆಸ್ಪತ್ರೆ ಬೆಳಗಾವಿಯಲ್ಲಿ ಬೃಹತ್ ಕಟ್ಟಡವಾದರೂ ಇಲ್ಲಿಯವರೆಗೆ ಉದ್ಘಾನೆಯ ಭಾಗ್ಯ ಮಾತ್ರ ಕಂಡಿಲ್ಲ.
ಏಳು ಜಿಲ್ಲೆಗೆ ಅನಕೂಲವಾಗಲಿ ಎಂದು ಸರಕಾರ ಬೆಳಗಾವಿಯಲ್ಲಿ ವೈದ್ಯಕೀಯ ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದೆ. ಆದರೆ ಸ್ಥಳೀಯ ಆಡಳಿತ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಕಟ್ಟಡ ಉದ್ಘಾಟನೆಯಾಗಿ ಸೇವೆ ನೀಡುವಲ್ಲಿ ವಿಫಲವಾಗಿವೆ.
ಪ್ರಾಣಿಗಳಿಗೂ ಜೀವ ಇರುತ್ತೆ. ಜಿಲ್ಲೆಯ ರೈತರ ಧನ,ಕರುಗಳು ಹಾಗೂ ಪ್ರಾಣಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿ ವೈದ್ಯಕೀಯ ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ನೆರವೆರಿಸಿ ಸೇವೆ ಆರಂಭಿಸುವಂತೆ ಸೂಚಿಸಬೇಕೆಂಬುವದು ಜಿಲ್ಲೆ ಜನರ ಒತ್ತಾಯಸೆಯಾಗಿದೆ.