ಬೆಳಗಾವಿ: ಸಿದ್ದಗಿರಿ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜಿನ್ ಚಿಕಿತ್ಸೆಗಳು ಪ್ರತಿವಾರ ನಡೆಯುತ್ತಿರುತ್ತವೆ. ಬೇರೆ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಮಾಡಿದರೆ ಲಕ್ಷಾಂತರ ರೂ. ಖರ್ಚು ವೆಚ್ಚವಾಗುತ್ತದೆ. ಆದರೆ ನಮ್ಮ ಆಸ್ಪತ್ರೆಯಲ್ಲಿ ಬಡವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕನೇರಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ ಅವರು, ಗ್ರಾಮೀಣ ಭಾಗದ ಜನರಿಗೆ, ರೈತರಿಗೆ, ಬಡ ಕಾರ್ಮಿಕರ ಸೇವೆಗಾಗಿ ಹಣ ಇಲ್ಲ ಎಂದು ಚಿಕಿತ್ಸೆಯ ಉಪಚಾರ ಇಲ್ಲದೆ ಕೊರಗಬಾರದು. ಈ ನಿಟ್ಟಿನಲ್ಲಿ ಸಮಾಜದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸೇವೆ ಮಾಡಲಾಗುತ್ತಿದೆ ಎಂದರು.
ದೇಶದಲ್ಲಿ ಅಪಸ್ಮಾರ ಕಾಯಿಲೆಗೆ ಶಸ್ತ್ರಚಿಕಿತ್ಸೆ ನೀಡುವ ಆಸ್ಪತ್ರೆಗಳು ಕೇವಲ 10 ಇವೆ. ಅದರಲ್ಲಿ ಸಿದ್ದಗಿರಿ ಆಸ್ಪತ್ರೆಯೂ ಒಂದಾಗಿದೆ. ಸಿದ್ದಗಿರಿ ಆಸ್ಪತ್ರೆ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ನೀಡುತ್ತಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೃಹತ್ ಐಸಿಐ ಕೇಂದ್ರವನ್ನು ಆಸ್ಪತ್ರೆ ಹೊಂದಿದೆ ಎಂದರು.
ಡಾ.ಪ್ರಕಾಶ ಭರಮಗೊಂಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.