ಉಕ್ಕಿ ಹರಿಯುತ್ತಿರುವ ಮಾರ್ಕಾಂಡೇಯ ನದಿ : ಶಿರೂರ್ ಡ್ಯಾಂ ನಿಂದ ನೀರು ಬಿಡುಗಡೆ

  • 19 Dec 2023 , 4:33 AM
  • Bengaluru
  • 100

ಬೆಳಗಾವಿ : ಮಹಾರಾಷ್ಟ್ರ ಗಡಿಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರ ಹತ್ತಿರ ಅಡ್ಡಲಾಗಿ ಕಟ್ಟಿರುವ ಶಿರೂರ್ ಡ್ಯಾಮ್ ಭಾಗಶಃ ಭರ್ತಿಯಾಗಿದೆ. 
ಮಾರ್ಕಾಂಡೇಯ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಡ್ಯಾಮ್ ನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ‌ 3.69 ಟಿಎಂಸಿ ಇದ್ದು, ಡ್ಯಾಮ್ ನ ಒಳಹರಿವು 5000 ಟಿಎಂಸಿ ಒಳ ಹರಿವು ಹಾಗೂ 5000 ಟಿಎಂಸಿ ಹೊರ ಹರಿವು ಇದೆ. ಈಗಾಗಲೇ ಡ್ಯಾಮ್ ಭರ್ತಿಯಾಗಿದ್ದರಿಂದ ಒಟ್ಟು ನಾಲ್ಕು ಗೇಟ್ ಮುಖಾಂತರ ನೀರು ಬಿಡುಗಡೆ ಮಾಡಲಾಗುತಿದೆ. ಇದರಿಂದ ಜನರಲ್ಲಿ ಭಯದ ಆತಂಕ ನಿರ್ಮಾಣವಾಗಿದ್ದು ಪಾಶ್ಚಾಪೂರ ಸಮೀಪದ ಸುತ್ತಮುತ್ತಲಿನ ಗ್ರಾಮದ ಜಮೀನುಗಳಲ್ಲಿ ನೀರು ಸಂಗ್ರಹವಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ.

Read All News