ಕರ್ನಾಟಕದಲ್ಲಿ ಎಫ್ ಎಸ್ ಎಲ್ ಯುನಿವರ್ಸಿಟಿ ಸ್ಥಾಪನೆ: ಸಚಿವ ಆರಗ್

  • 14 Jan 2024 , 10:02 PM
  • Belagavi
  • 97

ಬೆಳಗಾವಿ : ಗುಜರಾತ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಎಫ್ ಎಸ್ ಎಲ್ ವಿಶ್ವವಿದ್ಯಾಲಯದ ಸ್ಥಾಪನೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ್ ಜ್ಞಾನೇಂದ್ರ ಹೇಳಿದರು.

ಗುಜರಾತ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಎಫ್ ಎಸ್ ಎಲ್ ಯುನಿವರಸಿಟಿ ಸ್ಥಾಪನೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ‌. ಜಮೀನು ನೀಡುವ ಬಗ್ಗೆ ನಿರ್ಣಯ ಮಾಡುತ್ತೇವೆ. ಪೊಲೀಸರ ಕೈ ಬಲ‌ಪಡಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.

ಪಿಎಸ್ಐ ಹಗರಣದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜೇಂದ್ರ ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ,‌ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಈ ಹಿಂದೆ ಪಿಎಸ್ಐ ನೇಮಕಾತಿ ಹಗರಣಗಳು ನಡೆದಿವೆ. ಆದರೆ ಯಾರೊಬ್ಬರ ಮೇಲೆ ಕಾಂಗ್ರೆಸ್ ನಾಯಕರು ಕ್ರಮ ಕೈಗೊಂಡಿಲ್ಲ. ಸಿಐಡಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ.

ನಮಗೆ ದಾಖಲೆ ಸಿಕ್ಕ 10 ನಿಮಿಷದಲ್ಲಿ ತನಿಖೆ ಆರಂಭಿಸಲಾಗಿದೆ ಎಂದರು ಈಗಾಗಲೇ ಎಡಿಜಿಪಿ ಸೇರಿ 20 ಜನ ಪೊಲೀಸ್ ಅಧಿಕಾರಿಗಳ ಬಂಧನ ಆಗಿದೆ. ಯಾರನ್ನು ಬಚಾವ್ ಮಾಡುವ ಪ್ರಶ್ನೆಯೇ ಇಲ್ಲ. ಸದನದಲ್ಲಿ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಯಾವುದೇ ದಾಖಲೆ ಇರಲಿಲ್ಲ.ನಾನು ಮಾಹಿತಿ‌ ಕೇಳಿದರೆ ಯಾರು ಕೊಡಲಿಲ್ಲ.ಈಗ ವಿಜಯೇಂದ್ರ ಸೇರಿ ಬೇರೆ ಬೇರೆಯವರು ಹೆಸರು ಹೇಳುತ್ತಾರೆ.ಇಷ್ಟು ಒಳ್ಳೆಯ ಕೆಲಸ ಮಾಡಿದಾಗ ಅಭಿನಂದನೆ ಸಲ್ಲುವ ಹೃದಯವಂತಿಕೆ ಕಾಂಗ್ರೆಸ್ ಗೆ ಇಲ್ಲ. ಇದರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಖಂಡನೀಯ ಎಂದರು.

Read All News