ಬೆಳಗಾವಿ: ಘಟಪ್ರಭಾ ನದಿಯ ಹಿಡಕಲ್ ಡ್ಯಾಂ (ರಾಜಾ ಲಖಮಗೌಡಾ ಜಲಾಶಯ) ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಜಲಾಶಯದ ಹತ್ತೂ ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಡಲಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಿಂದ ವರುಣನ ಆರ್ಭಟ ಜೋರಾಗಿಯೆ ಇದೆ ಅಪಾಯದ ಮಟ್ಟ ಮೀರಿ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿದೆ
ಶೇಕಡಾ 93% ರಷ್ಟು ಡ್ಯಾಂ ಭರ್ತಿ ಯಾಗಿದೆ 47.5 ಟಿಎಮ್ ಸಿ ನೀರು ಸಂಗ್ರಹ ವಾಗಿದ್ದು ಹಾಗೂ ಜಲಾಶಯದ ಹಿತದೃಷ್ಟಿಯಿಂದ ಇಂದು 5000 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ.
ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಜೀವನಾಡಿಯಾದ ಘಟಪ್ರಭಾ ನದಿಯ ಈ ಜಲಾಶಯ. ಈ ಬಾರಿ ಮಹಾರಾಷ್ಟ್ರದ ಪಶ್ಚಿಮ ಭಾಗದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಹಿಡಕಲ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.