ಬೆಳಗಾವಿ: ಬೆಳಗಾವಿ ನಗರದ ಕಲ್ಮಠದಲ್ಲಿ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ಪೂರ್ವಬಾವಿ ಸಭೆ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ವಿರೂಪಾಕ್ಷಯ್ಯ ನೀರಲಗಿಮಠ ಮಾತನಾಡಿ, ನಾಳೆ ಬೆಳಗಾವಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು,
ಜಿಲ್ಲಾ ಮಟ್ಟದಲ್ಲಿ ಸಂಚರಿಸಿ ಹೋರಾಟದ ಬಗ್ಗೆ ಪ್ರಚಾರ ತಿಳುವಳಿಕೆ ನೀಡಲು ಬೆಳಗಾವಿಯ ಜಿಲ್ಲಾ ಪದಾಧಿಕಾರಿಗಳಿಗೆ ವಹಿಸಲಾಯಿತು. ಅದರಂತೆ ಬೆಂಗಳೂರಿನಲ್ಲಿ ಬಿ ಡಿ ಹಿರೇಮಠ ರವರು ನಡೆಸುತ್ತಿರುವ ಸತ್ಯ ಪ್ರತಿಪಾದನಾ ಸತ್ಯಾಗ್ರಹದಲ್ಲಿ ಪಾಳಗೊಳ್ಳಲು ಜೂಲೈ ದಿ 20/21 ರಂದು ಬೆಳಗಾವಿಯಿಂದ ಸುಮಾರು ನೂರಾರು ಜನರು ಸೇರಿ ಹೋಗಲು ನಿರ್ಧರಿಸಲಾಯಿತು.
ಈ ಹೋರಾಟವನ್ನು ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲ ತಹಸೀಲ್ದಾರ್ ಕಚೇರಿ ಮುಂದೆ ಮನವಿ ಸಲ್ಲಿಸಿಲಾಗುವುದು ಈ ಸಂದರ್ಭದಲ್ಲಿ ಶಂಕರಯ್ಯ ಹಿರೇಮಠ, ಮಹಾಂತೇಶ ರಣಗಟ್ಟಿಮಠ, ದಾನಯ್ಯ ಹಿರೇಮಠ, ವಿನೋದ ಕೊಕಣಿ, ಮುರಗೇಂದ್ರ ಚರಲಿಂಗಮಠ ಶಾಸ್ತ್ರೀ, ಚರಂತಿಮಠ, ಶ ಬಸಯ್ಯ ಪರವಯ್ಯನವರ, ಶಶಿ ಕಲ್ಮಠ , ಶ ನಾಗಯ್ಯ ಕಲ್ಮಠ, ರವಿ ಶಾಸ್ತ್ರೀ, ಶ್ರೀಕಾಂತ್ ಚರಂತಿಮಠ, ಅಕ್ಷಯ ಹಿರೇಮಠ, ಶಂಕ್ರಯ್ಯ ಸೀಮಿಮಠ, ಚಂದ್ರಶೇಖರಯ್ಯ ಹಿರೇಮಠ ಶಾಸ್ತ್ರೀ, ಚಂದ್ರಯ್ಯ ಕುಲಕರ್ಣಿ, ಅಡವಯ್ಯ ಸೊಪ್ಪಿಮಠ, ದುಂಡಯ್ಯ ಮಠದ, ಚಿದಾನಂದ್ ಮಠದ ಇನ್ನಿತರರು ಜಂಗಮ ಬಾಗವಹಿಸಿದ್ದರು.