ಬೆಳಗಾವಿ : ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ದಾರಾಕಾರ ಮಳೆಗೆ ಗಡಿ ಜಿಲ್ಲೆ ಬೆಳಗಾವಿಯ ಕೆಲ ತಾಲೂಕಿನಲ್ಲಿ ಮಳೆ ನೀರಿನ ಹರಿವು ಹೆಚ್ಚಳವಾಗುತ್ತಿದ್ದರೂ ಹಲವು ಕಡೆಗಳಲ್ಲಿ ನೀರಿನ ಹರಿವು ಲೆಕ್ಕಿಸದೆ ಜನರು ವಾಹನ ಸವಾರಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡುತ್ತಿದೆ. ಜಿಲ್ಲೆಯ ವಿವಿಧ ಕಡೆ ಮಳೆಗೆ ಕೆಲ ಸೇತುವೆಗಳು ಮುಳುಗಡೆಯಾಗಿವೆ.
ಮುಳಗಡೆಯಾದ ಸೇತುವೆಯ ಮೇಲೆ ನಿಂತು ಕೆಲವರು ತಮ್ಮ ವಾಹನಗಳನ್ನು ಶುಚಿಗೊಳಿಸುತ್ತಿದ್ದಾರೆ. ಗೋಕಾಕ ತಾಲೂಕಿನ ಶಿಂಗಳಾಪುರ ಸೇತುವೆ ಮೇಲೆ ಬೈಕ್ ಸವಾರರ ಸಂಚಾರ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ಹೊರವಲಯದಲ್ಲಿರುವ ಸೇತುವೆ ಬಳಿ ನೀರಿನ ಹರಿವಿನ ಭಯವಿಲ್ಲದೆ ವಾಹನಗಳ ಸಂಚಾರ ನಡೆಸಿದ್ದಾರೆ.