ಬೆಳಗಾವಿ :ಚಿಕ್ಕೋಡಿ ಸದಲಗಾ ಪೊಲೀಸರ ಕಾರ್ಯಾಚರಣೆಯಿಂದ ನಕಲಿ ಪಾನಮಸಾಲಾ ಕಂಪನಿಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಸಂಜೀವ ಪಾಟೀಲ ಹೇಳಿದರು. ಶುಕ್ರವಾರ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ.17 ರಂದು ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲಿ ಕೆಲಸ ಮಾಡುವ ವ್ಯಕ್ತಿ ಪೊಲೀಸ್ ಠಾಣೆಗೆ ಆಗಮಿಸಿ ಪಾನಮಸಾಲಾ ಕಂಪನಿ ಗುಣಮಟ್ಟ ಸರಿ ಇಲ್ಲ ಎಂದು ದೂರು ನೀಡುತ್ತಾರೆ. ಅದನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಯಕ್ಸಂಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಪಾನ ಮಸಲಾ ಮಾರಾಟ ಮಾಡುವುದು ಗಮನಕ್ಕೆ ಬರುತ್ತದೆ.
ನಕಲಿ ಪಾನಮಸಾಲ ಮಾರಾಟ ಮಾಡುವ ವ್ಯಕ್ತಿಯನ್ನು ಬಂಧಿಸಿ ಕರೆದುಕೊಂಡು ಬಂದು ವಿಚಾರಣೆ ಮಾಡಿದಾಗ ದೊಡ್ಡ ಜಾಲ ಇರುವುದು ಪತ್ತೆಯಾದ ಮೇಲೆ ನಕಲಿ ಪಾನಮಸಾಲಾ ಕಂಪನಿ ಮೇಲೆ ದಾಳಿ ನಡೆಸಿ ಚಿಕ್ಕೋಡಿ ಪೊಲೀಸರ ತಂಡ ಲ್ಯಾಮಿನೆಷನ ಕವರ್ ಸೇರಿದಂತೆ ರಾಜ್ಯದಲ್ಲಿ ಚಲಾವಣೆಯಾಗದ ಪಾನಮಸಾಲಾ ಉತ್ಪಾದನೆಯ ಕವರ್ ದೆಹಲಿಯಲ್ಲಿ ವಶಪಡಿಕೊಂಡು ಬಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.