ದೆಹಲಿ: ಕೋವಿಡ್ ಸಂದರ್ಭದಲ್ಲಿ ಅಘಾದ ಹಾಗೂ ನಿಸ್ವಾರ್ಥ ವೈದ್ಯಕೀಯ ಸೇವೆ ಕಲ್ಪಿಸಿದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮೂತ್ರರೋಗ( ಯುರಾಲಾಜಿ) ಹಿರಿಯ ತಜ್ಞವೈದ್ಯರಾದ ಡಾ. ರಾಜೇಂದ್ರ ನೇರ್ಲಿ ಅವರನ್ನು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಎಕನಾಮಿಕ್ ಟೈಮ್ಸ್ ಮತ್ತು ಎಡ್ಜ್ ಶೃಂಗಸಭೆಯಲ್ಲಿ ಮಾಜಿ ರಾಜ್ಯಪಾಲೆ ಕಿರಣ ಬೇಡಿ ಅವರು ಸತ್ಕರಿಸಿದರು.
ವೈದ್ಯಕೀಯ ಭ್ರಾತೃತ್ವದ ಹಿನ್ನಲೆಯಲ್ಲಿ ವೈದ್ಯರ ನಿಸ್ವಾರ್ಥ ಸೇವೆಗಾಗಿ ದೇಶದ ವಿವಿಧ ಭಾಗಗಳ ಸುಮಾರು 200 ಕ್ಕೂ ಅಧಿಕ ವೈದ್ಯರನ್ನು ಗೌರವಿಸಿ, ಪ್ರಶಸ್ತಿಗಳನ್ನು ನೀಡುತ್ತದೆ. ಅದರಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ. ರಾಜೇಂದ್ರ ನೇರ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಬಿಹಾರದ ಆರೋಗ್ಯ ಸಚಿವ ಡಾ.ಮಂಗಲ್ ಪಾಂಡೆ, ಡಾ.ತಮಿಳಸಾಯಿ ಸೌಂದರ್ ರಾಜನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎಕನಾಮಿಕ್ ಟೈಮ್ಸ್ ಮತ್ತು ವೈದ್ಯಕೀಯ ತಜ್ಞರೊಂದಿಗೆ ಸಮಗ್ರವಾದ ಸಂವಾದದ ನಂತರ ಭಾರತದಿಂದ ಒಟ್ಟು 200 ವೈದ್ಯರನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಡಾ ರಾಜೇಂದ್ರ ನೇರ್ಲಿ ಅವರೂ ಒಬ್ಬರು.