ರಷ್ಯಾ: ಮೊಟ್ಟ ಮೊದಲ ಕೊವೀಡ್ ಲಸಿಕೆ ಕಂಡು ಹಿಡಿದ ಹೆಮ್ಮೆ ಇಗ ರಷ್ಯಾಕ್ಕೆ ಸಲ್ಲುತ್ತಿದೆ ಸದ್ಯ ರಷ್ಯಾದಲ್ಲಿ ಲಸಿಕೆ ನೊಂದಣಿಯಾಗಿದೆ ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಿಳಿಸಿದ್ದಾರೆ, ಪ್ರಮುಖವಾಗಿ ಪುಟಿನ್ ಅವರ ಪುತ್ರಿಗೆ ಲಸಿಕೆ ಪ್ರಯೋಗ ಮಾಡಲಾಗಿದ್ದು. ಪುಟಿನ್ ತನ್ನ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರು ಪಡೆದುಕೊಂಡಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.ಇದೇ ವೇಳೆ ತಾವು ಕಂಡು ಹಿಡಿದಿರುವ ಲಸಿಕೆಯನ್ನು ವೈದ್ಯಕೀಯ ಕಾರ್ಯಕರ್ತರು, ಶಿಕ್ಷಕರು ಮತ್ತು ಇತರ ಅಪಾಯದ ಹಂತದಲ್ಲಿರುವ ಗುಂಪುಗಳಿಗೆ ಮೊದಲು ಚುಚ್ಚುಮದ್ದನ್ನು ನೀಡಲಾಗುವುದು ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಹಂತ ಮುಗಿದ ಕೂಡಲೇ ಮಾರುಕಟ್ಟೆಗೆ ಲಸಿಕೆ ಬಿಡುಗಡೆಯಾಗಿದೆ.
ಜನ ಬಳಕೆಗೆ ಕೊರೊನಾ ಲಸಿಕೆ ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶ ಎನ್ನುವ ಹಿರಿಮೆಗೆ ರಷ್ಯಾ ಈಗ ಪಾತ್ರವಾಗಿದೆ.
ರಷ್ಯಾ ರಕ್ಷಣಾ ಸಚಿವಾಲಯ ಗಮಾಲೆಯ ರಿಸರ್ಚ್ ಇನ್ ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ .