ರಕ್ಕಸಕೊಪ್ಪ ಡ್ಯಾಮ್ ನಿಂದ ಹೆಚ್ವುವರಿ ಸಂಗ್ರಹ ನೀರು ಬಿಡುಗಡೆ

  • 14 Jan 2024 , 10:23 PM
  • Belagavi
  • 116

ಬೆಳಗಾವಿ: ಪಶ್ಚಿಮ ಘಟದಲ್ಲಿ ಸುರಿಯುತ್ತಿರುವ ಮಳೆಗೆ ಬೆಳಗಾವಿ ನಗರದ ರಕ್ಕಸಕೊಪ್ಪ ಡ್ಯಾಮ್ ಭರ್ತಿಯಾಗಿದ್ದು ಹೆಚ್ವುವರಿ ನೀರನ್ನು ಮೂರು ಗೇಟ್ ಗಳ ಮೂಲಕ ನಿಧಾನವಾಗಿ ಹೊರ ಬಿಟ್ಟಿದ್ದಾರೆ.

ಸತತವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿರುವ ಎಲ್ಲ ಡ್ಯಾಂ ಗಳು ಬಹುತೇಕ ಭರ್ತಿಯಾಗುವ ಹಂತಕ್ಕೆ ಬಂದಿವೆ. ಅದರಂತೆ ಬೆಳಗಾವಿ ನಗರದ ಜೀವನಾಡಿ ಎಂದು ಕರೆಯಲ್ಪಡುವ ರಕ್ಕಸಕೊಪ್ಪ ಡ್ಯಾಂ ನಿಂದ ಮಳೆಯಿಂದ‌ ಸಂಗ್ರಹವಾದ ಹೆಚ್ಚುವರಿ ನೀರನ್ನು ಮಾತ್ರ ಹೊರಗಡೆ ಬಿಡಲಾಗುತ್ತಿದೆ.

ಏಕಕಾಲಕ್ಕೆ ಎಲ್ಲ ನೀರನ್ನು ರಭಸವಾಗಿ ಬಿಟ್ಟರೆ ರಕ್ಕಸಕೊಪ್ಪ ಅಕ್ಕಪಕ್ಕದ ಜಮೀನು ಹಾಗೂ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಮೂರು ಗೇಟ್ ನಿಂದ‌ ನಿಧಾನವಾಗಿ ನೀರನ್ನು ಬಿಡಯಗಡೆ ಮಾಡಲಾಗಿದೆ.

Read All News