ವಿದ್ಯಾ ಸಮರ್ದಕ ಮಂಡಳ ಸಂಸ್ಥೆಯಿಂದ ಹೊಸ ಕೋರ್ಸ್ ಆರಂಭ: ಸಿದ್ದಗೌಡ ಪಾಟೀಲ

  • 15 Jan 2024 , 4:40 AM
  • Belagavi
  • 112

ನಿಪ್ಪಾಣಿ: ಪ್ರಸಕ್ತ ವರ್ಷದಲ್ಲಿ ವಿದ್ಯಾ ಸಮರ್ದಕ ಮಂಡಳ ಸಂಸ್ಥೆ ಆರ್ಟಿಫಿಷಿಯಲ್ ಇನ್ಟಲಿಜನ್ಸಿ ಮಷೀನ್ ಲರ್ನಿಂಗ್ ಹೊಸ ಕೋರ್ಸ್ ಆರಂಭಿಸಲಿದ್ದೇವೆ ವಿದ್ಯಾ ಸಮರ್ದಕ ಮಂಡಳದ ಸಿಇಒ ಡಾ. ಸಿದಗೌಡ ಪಾಟೀಲ ಹೇಳಿದರು. ಗಡಿಭಾಗದ ನಿಪ್ಪಾಣಿಯಲ್ಲಿರುವ ಪ್ರತಿಷ್ಠಿತ ಸಂಸ್ಥೆ ವಿದ್ಯಾ ಸಮರ್ದಕ ಮಂಡಳ 1960ರಲ್ಲಿ ಈ ವಿದ್ಯಾ ಸಮರ್ದಕ ಮಂಡಳ ಸ್ಥಾಪನೆಗೊಂಡಿತು.

ಸುಮಾರು 6 ಸಾವಿರ ವಿದ್ಯಾರ್ಥಿಗಳಿಗೆ ನೂರಕ್ಕಿಂತ ಅಧಿಕ ಪ್ರಾಧ್ಯಾಪಕರ ಸೇವೆ ಸಲ್ಲಿಸುತ್ತಿದ್ದೇವೆ. ವಿದ್ಯಾ ಸಮರ್ದಕ ಮಂಡಳ 10ಕ್ಕಿಂತ ಅಧಿಕ ಅಂಗ ಸಂಸ್ಥೆ ಹೊಂದಿದೆ. ಅದರಲ್ಲಿ ವಿದ್ಯಾ ಸಮರ್ದಕ ಮಂಡಳದ ಸೋಮಶೇಖರ ಆರ್. ಕೋಟಿವಾಲೆ ತಾಂತ್ರಿಕ ಮಹಾವಿದ್ಯಾಲಯವು ಕೂಡಾ ಒಂದು 2010ರಲ್ಲಿ ಎಐಸಿಟಿ ಹಾಗೂ ಬೆಳಗಾವಿಯ ವಿಟಿಯುನಿಂದ ಮಾನ್ಯತೆ ಪಡೆದು 18 ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಈ ವಿಧ್ಯಾಲಯ ಈಗ ಸಾವಿರಕ್ಕಿಂತ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದರು.

ನಮ್ಮ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೊದಲು ಕಂಪ್ಯೂಟರ್ ಸೈನ್ಸ್, ಇಲೆಕ್ಟಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್, ಮೆಕಾನಿಕಲ್ ಇಂಜನಿಯರಿಂಗ್, ಸಿವಿಲ್ ನಾಲ್ಕು ಕೋರ್ಸ್ಗಳನ್ನು ಆರಂಭಿಸಲಾಗಿತು.

ವಿದ್ಯಾ ಸಮರ್ದಕ ಮಂಡಳ ಸಂಸ್ಥೆಯ ಪ್ರಮುಖ ಉದ್ದೇಶ ಗ್ರಾಮೀಣ ಭಾಗದ ಮಕ್ಕಳಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. ಈ ಭಾಗದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಬೇಕೆಂದು ಚಂದ್ರಕಾಂತ ಕೋಟಿವಾಲೆ, ಪಪ್ಪು ಪಾಟೀಲ ನೇತೃತ್ವದಲ್ಲಿ ಈ ತಾಂತ್ರಿಕ ಮಹಾವಿದ್ಯಾಲಯದ ಸ್ಥಾಪನೆ ಮಾಡಲಾಯಿತು.

ನಮ್ಮಲ್ಲಿ ನುರಿತ ಶಿಕ್ಷಕರು ಇದ್ದಾರೆ. ಅಲ್ಲದೆ ಗುಣಮಟ್ಟದ ಪ್ರಯೋಗಾಲಯ ಮಾಡಲಾಗಿದೆ. ಸುಂದರವಾದ ಗ್ರಂಥಾಲಯ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿನಿಲಯಗಳನ್ನು ನಿರ್ಮಿಸಲಾಗಿದೆ. ಕ್ಯಾಂಟೀನ್ ವ್ಯವಸ್ಥೆ ಎಲ್ಲದಕ್ಕಿಂತ ಮುಖ್ಯವಾಗಿ ಡೋನೇಷನ್ ತೆಗೆದುಕೊಳ್ಳದೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಗುರಿಯಾಗಿದೆ. ನಿಪ್ಪಾಣಿಯಿಂದ ಒಳ್ಳೆಯ ಇಂಜನಿಯರ ಕೊಡುವ ಯೋಜನೆ ನಮ್ಮ ಶಿಕ್ಷಣ ಸಂಸ್ಥೆ ಹೊಂದಿದೆ ಎಂದರು.

Read All News