ಶಿಕ್ಷಕರಿಗೆ ವರ್ಕ್ ಪ್ರಾಂ ಹೋಂ ಕರ್ತವ್ಯ ನಿರ್ವಹಿಸಲು ಶಿಪಾರಸ್ಸಿಗೆ ಮನವಿ

  • 14 Jan 2024 , 11:12 PM
  • Haveri
  • 198

ರಾಣೇಬೆನ್ನೂರ: ಕೊರೊನಾ ಸೋಂಕು ವ್ಯಾಪಕವಾಗಿ ಎಲ್ಲೆಡೆ ಹರಡುತ್ತಿದ್ದರಿಂದ ಈಗಾಗಲೇ ತಾಲ್ಲೂಕಿನಲ್ಲಿ ಇಬ್ಬರ ಶಿಕ್ಷಕರನ್ನು ಬಲಿ ತೆಗೆದುಕೊಂಡಿದೆ. ಇನ್ನು ಹಲವರು ಗಂಟಲುದ್ರವ ಮಾದರಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಕಾರಣ ಶಿಕ್ಷಕರಿಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ವರ್ಕ್ ಪ್ರಾಂ ಹೋಂ ಕರ್ತವ್ಯ ನಿರ್ವಹಿಸಲು ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಶಾಸಕ ಅರುಣಕುಮಾರ ಪೂಜಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ.ಶಿಡೇನೂರು ಮಾತನಾಡಿ, ಕೋವಿಡ್‍ನಿಂದಾಗಿ ಇಬ್ಬರು ಶಿಕ್ಷಕರು ನಿಧನ ಹೊಂದಿದ್ದಾರೆ. ಇದರಿಂದ ಶಿಕ್ಷಕರಲ್ಲಿ ಆತಂಕ ಹುಟ್ಟಿದೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ತಂದಿರುವ ವಿದ್ಯಾಗಮ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ಈ ಯೋಜನೆ ಬಹಳ ಚೆನ್ನಾಗಿದ್ದು ಅದು ಅನುಷ್ಠಾನಗೊಳ್ಳಲು ಸದ್ಯಕ್ಕೆ ಒಳ್ಳೆಯ ಲಕ್ಷಣಗಳಿಲ್ಲ. ಕೊರೊನಾ ಸಮುದಾಯಕ್ಕೆ ಹರಡಿದ್ದರಿಂದ ಶಿಕ್ಷಕರು ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು, ಪಾಲಕರು ತಮ್ಮ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗೂ ಈ  ಕಲಿಕಾ ಯೋಜನೆಗೂ ಸಹಕರಿಸುತ್ತಿಲ್ಲಎಂದರು. ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಕರ, ವಿದ್ಯಾರ್ಥಿಗಳ ಸಮುದಾಯದ ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಶಾಲಾ ಪ್ರದೇಶಗಳಲ್ಲಿ ಕಷ್ಟ ಸಾಧ್ಯ. ಅದಕ್ಕಾಗಿ ನಾವೆಲ್ಲರೂ ವರ್ಕ ಪ್ರಾಂ ಹೋಂನಿಂದಲೇ ಕರ್ತವ್ಯ ನಿರ್ವಹಿಸಲು ಸಿದ್ದರಿದ್ದೇವೆ. ಅದಕ್ಕೆ ಶಾಸಕರು ಅವಕಾಶ ಕಲ್ಪಿಸಲು ಶಾಸಕರು ಶಿಫಾರಸ್ಸು ಮಾಡಬೇಕುಎಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ರವಿ ಗೋಣೆಪ್ಪನವರ, ಎಸ್.ಎಚ್. ಮೇಟಿ, ಎಂ.ಸಿ.ಬಲ್ಲೂರ, ಆರ್.ಡಿ. ಹೊಂಬರಡಿ, ಪ್ರಕಾಶ ಹೊಸಳ್ಳಿ, ಎಂ.ಎ ದಾರೂಗಾರ, ಎಸ್,ಜಿ. ಮಾಕಾಳ, ಎಸ್.ಎಂ. ಮಲ್ಲನಗೌಡ್ರ, ಅನ್ನಪೂರ್ಣ ಬಣಕಾರ, ಬಿ.ಜಿ.ಬಡಿಗೇರ, ಎಲ್.ಎಚ್. ಹನುಮರಡ್ಡೇರ, ರಾಜು ಎಮ್ಮೇರ ಸೇರಿದಂತೆ ಮತ್ತಿತರು ಇದ್ದರು.

Read All News