ಹೆಚ್ಚುವರಿ ಜಿಎಸ್ ಟಿ ಖಂಡಿಸಿ ಆಮ್ ಆದ್ಮಿ ಪ್ರತಿಭಟನೆ

  • 14 Jan 2024 , 9:31 PM
  • Belagavi
  • 100

ಬೆಳಗಾವಿ :ಕೇಂದ್ರ ಸರ್ಕಾರ ಆಹಾರ ಧಾನ್ಯ ಹಾಗೂ ಬೆಳೆ ಕಾಳುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ಹೆರಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಬುಧವಾರ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಲೆ ಏರಿಕೆ ನಡುವೆ ಕೆಂಗಟ್ಟಿರುವ ಜನರಿಗೆ ಅಗತ್ಯ ವಸ್ತುಗಳಾದ ಹಾಲು, ಮೊಸರಿನ‌ ಮೇಲೆಯೂ ಸೇವಾ ತೆರಿಗೆ ಹೊರೆ ಹಾಕಿರುವುದನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ತೆರಿಗೆ ಹೆಚ್ಚಳದಿಂದ ಸಣ್ಣ ಮತ್ತು ಮಧ್ಯಮ ಅಂಗಡಿ ವ್ಯಾಪಾರಸ್ಥರಿಗೆ ಹೊರೆಯಾಗುತ್ತದೆ.
 

ಅಲ್ಲದೆ, ಕೃಷಿ ಉತ್ಪನಗಳ ಮೇಲೆ ಹೆಚ್ಚು ಪರಿಣಾಮ ಬಿರಲಿದೆ. ಪ್ರಮುಖವಾಗಿ ಜನಸಾಮಾನ್ಯರ ಜೀಬಿಗೆ ಇದು ಕತ್ತರಿ ಬಿಳುತ್ತದೆ ಎಂದು ದೂರಿದರು. ಕೇಂದ್ರ ಸರ್ಕಾರ ಆಹಾರ ಧಾನ್ಯ ಹಾಗೂ ಬೆಳೆ ಕಾಳುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ಹೆರಿರುವುದು ಖಂಡನೀಯ.

ಇತ್ತಿಚೆಗೆ ಕೇಂದ್ರ ಸರ್ಕಾರ ಆಹಾರ ಧಾನ್ಯಗಳು ಹಾಗೂ ಬೆಳೆಕಾಳು ವಹಿವಾಟು ಮೇಲೆ ಶೇ.5 ರಷ್ಟು ತೆರಿಗೆ ವಿಧಿಸಿದ್ದು, ಇದರಿಂದ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಹಾಗೂ ವರ್ತಕರಿಗೆ ತೊಂದರೆಯಾಗಲಿದೆ. ಕೂಡಲೇ ಸರ್ಕಾರ ಜಿಎಸ್‌ಟಿ ಕೌನ್ಸಿಲ್ ಕೂಡಲೇ ತನ್ನ ಆದೇಶ ಹಿಂಪಡೆಯಬೇಕು ಆಗ್ರಹಿಸಿದರು.

ಆಮ್ ಆದ್ಮಿ ಉತ್ತರ ಕರ್ನಾಟಕ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News